Thursday, June 4, 2026
Homeಕರಾವಳಿಸುಬ್ರಮಣ್ಯ:ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಅನ್ಯಕೋಮಿನ ಯುವಕನಿಗೆ ಹಲ್ಲೆ ಪ್ರಕರಣ; ಆರೋಪಿಗಳಿಗೆ ಜಾಮೀನು ಮಂಜೂರು

ಸುಬ್ರಮಣ್ಯ:ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಅನ್ಯಕೋಮಿನ ಯುವಕನಿಗೆ ಹಲ್ಲೆ ಪ್ರಕರಣ; ಆರೋಪಿಗಳಿಗೆ ಜಾಮೀನು ಮಂಜೂರು

- Advertisement -
- Advertisement -

ಸುಬ್ರಮಣ್ಯ: ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಅನ್ಯಕೋಮಿನ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಆರೋಪಿಗಳು ಆಪೀದ್ ನನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿ ಕುಮಾರಧಾರ ಜಂಕ್ಷನ್ ಹತ್ತಿರ ಇರುವ ಹಳೆ ಕಟ್ಟಡದ ಕೋಣೆಯೊಳಗೆ ಕೂಡಿಹಾಕಿದ್ದರು. ಬಳಿಕ 10 ರಿಂದ 12 ಜನರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು.

ಈ  ಬಗ್ಗೆ ಐಪಿಸಿ ಕಲಂ 323, 324, 307, 365, 143, 147, 149 ರಂತೆ ಸುಬ್ರಹ್ಮಣ್ಯ ಪೊಲೀಸರ ಪ್ರಕರಣ ದಾಖಲಿಸಿ ದಿನಾಂಕ ಜನವರಿ 6ರಂದು ಆರೋಪಿಗಳನ್ನು  ಬಂಧಿಸಿದ್ದರು. ಇದೀಗ ಬಂಧಿತರಾದ ರಾಧಾಕೃಷ್ಣ ಮತ್ತು ವಿಶ್ವಾಸ್ ಇವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿಗಳ ಪರವಾಗಿ ಕಿಶೋರ್ ಕುಮಾರ್ ಮಂಗಳೂರು, ಚಿನ್ಮಯ್ ರೈ ಈಶ್ವರಮಂಗಲ ಮತ್ತು ಹರೀಶ್ ಬೂಡುಪನ್ನೆ ವಾದಿಸಿದ್ದರು.

- Advertisement -

Latest News

error: Content is protected !!