Friday, June 5, 2026
Homeತಾಜಾ ಸುದ್ದಿಮಂಗಳೂರು; ಉಳ್ಳಾಲದಲ್ಲಿ ವ್ಯಕ್ತಿಯ ಕೊಲೆಗೆ ಯತ್ನ

ಮಂಗಳೂರು; ಉಳ್ಳಾಲದಲ್ಲಿ ವ್ಯಕ್ತಿಯ ಕೊಲೆಗೆ ಯತ್ನ

- Advertisement -
- Advertisement -

ಮಂಗಳೂರು; ವ್ಯಕ್ತಿಯ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ತಲಪಾಡಿ ನಿವಾಸಿ ಮಕರೇಂದ್ರ ಎಂಬಾತನ ಮೇಲೆ ಪರಿಚಿತ ವ್ಯಕ್ತಿಯೇ ಹಲ್ಲೆ ನಡೆಸಿದ್ದಾನೆ.

ಮಕರೇಂದ್ರ ಎಂಬಾತ ಬಾರ್ ನತ್ತ ಬಂದು ಪರಿಚಿತ ವಿಲ್ಫ್ರೆಡ್ ಮೈಕಲ್ ಡಿಸೋಜ ಬಳಿ ಕುಡಿಯಲು ಹಣ ಕೇಳಿದ್ದಾನೆ‌. ಇದಕ್ಕೆ ಕೋಪಗೊಂಡ ವಿಲ್ಫ್ರೆಡ್, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಹಲ್ಲೆ ನಡೆಸಿದಾಗ ಮಕರೇಂದ್ರ ರಸ್ತೆಗೆ ಬಿದ್ದಿದ್ದಾನೆ.ಈ ವೇಳೆ ರಸ್ತೆಯಲ್ಲಿ ಕಲ್ಲು ಮಕರೇಂದ್ರನ ತಲೆಗೆ ಬಡಿದು ಗಂಭೀರವಾಗಿ ಗಾಯವಾಗಿದೆ.ಆತನಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾಯಲಿ ಎಂಬ ಉದ್ದೇಶದಿಂದ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!