Thursday, May 2, 2024
Homeಕರಾವಳಿಪುತ್ತೂರು; ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ ಎಂದ ಯುವಕ; ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ...

ಪುತ್ತೂರು; ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ ಎಂದ ಯುವಕ; ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಸಾರ್ವಜನಿಕರು

spot_img
- Advertisement -
- Advertisement -

ಕಡಬ; ಯುವಕನೋರ್ವ ಯುವತಿಯೊಬ್ಬಳ ಬಳಿ ‘ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ’ ಎಂದು ಕೇಳಿದ್ದಕ್ಕೆ  ಸಾರ್ವಜನಿಕರು ಯುವಕನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪುತ್ತೂರು ಸಮೀಪದ ಬಲ್ನಾಡು ಗ್ರಾಪಂ ವ್ಯಾಪ್ತಿಯ ಸಾಜ ಪನೆತ್ತಡ್ಕ  ಎಂಬಲ್ಲಿ ನಡೆದಿದೆ.

ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಅ.20ರಂದು ಸಂಜೆ ಬಸ್ಸಿನಿಂದ ಇಳಿದು ಮನೆಗೆ ತೆರಳುತ್ತಿದ್ದ ಯುವತಿಯೊರ್ವಳನ್ನು ಅದೇ ದಾರಿಯಲ್ಲಿ  ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಾಜ ನಿವಾಸಿಯೋರ್ವ  ಬರ್ತೀಯಾ ಎಂದು ಕೇಳಿದ್ದಾನೆ ಎನ್ನಲಾಗಿದ್ದು ಈ ವಿಷಯವನ್ನು ಯುವತಿಯು ತನ್ನ ಮನೆಯಲ್ಲಿ ತಿಳಿಸಿದ್ದಳು.

ಯುವಕನ  ಸ್ಕೂಟರ್ ಪನೆತ್ತಡ್ಕ ಎಂಬಲ್ಲಿಗೆ ತಲುಪಿದಾಗ ಹಾಳಾಗಿದ್ದು ಸ್ಕೂಟರ್ ಅನ್ನು ಅಲ್ಲೇ ಬಿಟ್ಟು ಮನೆಗೆ ತೆರಳಿದ್ದಾನೆ  ಎನ್ನಲಾಗಿದೆ.  ಮರುದಿವಸ ಅಂದರೆ ಅ.೨೧ ರಂದು ಬೆಳಿಗ್ಗೆ ಮೆಕ್ಯಾನಿಕ್‌ರವರನ್ನು ಕರೆದುಕೊಂಡು ಸ್ಕೂಟರ್ ನಿಲ್ಲಿಸಿದ್ದ ಪನೆತ್ತಡ್ಕಕ್ಕೆ ಬಂದಾಗ ಸ್ಥಳದಲ್ಲಿ ಸೇರಿದವರು ಯುವಕನನ್ನು  ಹಿಡಿದು ವಿದ್ಯುತ್ ಕಂಬಕ್ಕೆ  ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಇದೇ ವೇಳೆ ಕೆಲವರು ಆತನನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ವಿದ್ಯುತ್ ಕಂಬದಿಂದ ಬಿಡಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.ಯುವಕನ ಹೆಸರು ನಾಗರಾಜ್ ಎಂದು ಹೇಳಲಾಗುತ್ತಿದೆ.ಹೆಚ್ಚಿನ ಮಾಹಿತಿ ಲಭಿಸಿಲ್ಲ.

- Advertisement -
spot_img

Latest News

error: Content is protected !!