Wednesday, June 24, 2026
Homeಕರಾವಳಿಪುತ್ತೂರು: ಮಹಿಳೆಯ ಮೇಲೆ ಆಕೆಯ ಸಹೋದರರಿಂದ ಹಲ್ಲೆ ಆರೋಪ

ಪುತ್ತೂರು: ಮಹಿಳೆಯ ಮೇಲೆ ಆಕೆಯ ಸಹೋದರರಿಂದ ಹಲ್ಲೆ ಆರೋಪ

- Advertisement -
- Advertisement -

ಪುತ್ತೂರು: ಮಹಿಳೆಯೊಬ್ಬರ ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಆಕೆಯ ಸಹೋದರ ಮತ್ತು ಇತರರು ಹಲ್ಲೆ ನಡೆಸಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಮಹಿಳೆಯು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಡಿಂಬ್ರಿ ಎಂಬಲ್ಲಿನ ನಿವಾಸಿ ಶಂಕರ್ ಭಂಡಾರಿ ಎಂಬವರ ಪತ್ನಿ ಆಶಾ ಶಂಕರ್ ಭಂಡಾರಿ(54) ಗಾಯಗೊಂಡ ಮಹಿಳೆ. ಅವರು ಡಿ.27ರಂದು ಕುರಿಯದಲ್ಲಿರುವ ತನ್ನ ಕೃಷಿ ಜಾಗದಲ್ಲಿದ್ದ ವೇಳೆ ಅವರ ಸಹೋದರ ಅರುಣ್ ಕುಮಾರ್  ಮತ್ತು ಕೆಲಸಗಾರರಾದ ವಿನಯ ಮತ್ತು ಸುಂದರ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!