Thursday, June 4, 2026
Homeಕರಾವಳಿಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ದಾಳಿ, ಆರೋಪಿಗಳು ಪರಾರಿ !

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ದಾಳಿ, ಆರೋಪಿಗಳು ಪರಾರಿ !

- Advertisement -
- Advertisement -

ಬೆಳ್ತಂಗಡಿ : ನಡ ಗ್ರಾಮದ ಪಾರ್ನಡ್ಕ ಎಂಬಲ್ಲಿ ನಡೆಯಿತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಲಾಗಿದೆ. ಬಜರಂಗದಳದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೋಲೀಸರು ದಾಳಿ ನಡೆಸಿದ್ದಾರೆ.

ಈ ಘಟನೆ ಬೆಳ್ತಂಗಡಿ ತಾಲೂಕು ಬರಾಯ ಕನ್ಯಾಡಿ ಗ್ರಾಮದ ಕೆಲ್ತಾಜೆ ಎಂಬಲ್ಲಿ ನಡೆದಿದೆ. ಆರೋಪಿತರು, ತಾಜುದ್ದೀನ್ ಕಿರ್ನಡ್ಕ ನಾವೂರು ಗ್ರಾಮ, ಬೆಳ್ತಂಗಡಿ, ರಜಾಕ್ (35) ಕೆಲ್ತಾಜೆ ಮನೆ, ನಡ ಗ್ರಾಮ ಪೆರ್ಮಾಣು ಬೆಳ್ತಂಗಡಿ ಮತ್ತು ಇತರ ಇಬ್ಬರು ವ್ಯಕ್ತಿಗಳು.

ಬೆಳ್ತಂಗಡಿ ತಾಲೂಕು ಬರಾಯ ಕನ್ಯಾಡಿ ಗ್ರಾಮದ ಕೆಲ್ತಾಜೆ ಎಂಬಲ್ಲಿಯ ರಜಾಕ್ ಎಂಬವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಆರೋಪಿತ ರಜಾಕ್ ಹೊರತು ಪಡಿಸಿ ಉಳಿದ ಆರೋಪಿಗಳು ಓಡಿ ತಪ್ಪಿಸಿಕೊಂಡಿದ್ದು ಆರೋಪಿಗಳು ಯಾವುದೇ ಪರವಾನಗಿಯಾ ಅನುಮತಿಯನ್ನು ಪಡೆಯದೇ ಜಾನುವಾರನ್ನು ವಧೆ ಮಾಡಿದ್ದು ಜಾನುವಾರಿನ ಚರ್ಮ ಸುಲಿದ ಸುಮಾರು 40 ಕೆಜಿ ತೂಕದಷ್ಟು ದೇಹದ ಭಾಗಗಳು ಅಂದಾಜು ರೂ. 10,000/- ಹಾಗೂ ಜಾನುವಾರಿನ ತಲೆ, ಚರ್ಮ ಮತ್ತು ತ್ಯಾಜ್ಯ ಮತ್ತು ವಧೆ ಮಾಡಲು ಉಪಯೋಗಿಸಿದ ಮಂಡೆ ಕತ್ತಿ- 1, ಅಂದಾಜು ಮೌಲ್ಯ 100/- ರೂ ಚಾಕುಗಳು- 2. ಅಂದಾಜು ಮೌಲ್ಯ-50/- ರೂ. ನೀಲಿ ಬಣ್ಣದ ಟರ್ಪಾಲು – 1 ಅಂದಾಜು ಮೌಲ್ಯ 50/-ರೂ, ಮರದ ತುಂಡು -1 ಇವುಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನಾ ವಶಕ್ಕೆ ಪಡೆದು ಈ ಬಗ್ಗೆ ನೀಡಿದ ವರದಿಯಂತೆ ಪ್ರಕರಣ ದಾಖಲಾಗಿದೆ

ಅರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!