Friday, June 5, 2026
Homeಕರಾವಳಿವಿಟ್ಲ; ಹೇಳದೆ ಮನೆ ಬಿಟ್ಟು‌ ಹೋಗಿದ್ದಾರೆಂದು ಬಾಲಕಿಯರಿಬ್ಬರಿಗೆ ಹಲ್ಲೆ: ಬುರ್ಖಾ ತೆಗೆದು ನೋಡಿದಾಗ ಬಾಲಕಿಯರೇ ಬೇರೆ..

ವಿಟ್ಲ; ಹೇಳದೆ ಮನೆ ಬಿಟ್ಟು‌ ಹೋಗಿದ್ದಾರೆಂದು ಬಾಲಕಿಯರಿಬ್ಬರಿಗೆ ಹಲ್ಲೆ: ಬುರ್ಖಾ ತೆಗೆದು ನೋಡಿದಾಗ ಬಾಲಕಿಯರೇ ಬೇರೆ..

- Advertisement -
- Advertisement -

ವಿಟ್ಲ: ಇಲ್ಲಿನ ಸಾಲೆತ್ತೂರು ನಿವಾಸಿ ಆಟೋ ಚಾಲಕನ ಪುತ್ರಿ ತನ್ನ ಸ್ನೇಹಿತೆಯಾದ ಮತ್ತೊಬ್ಬ ಬಾಲಕಿಯ ಜತೆ
ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಬಿಟ್ಟು ತೆರಳಿದ್ದರು.‌ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಕೆಲ ನಕಲಿ ಸಮಾಜ ಸೇವಕರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ.

ಹೀಗೆ ವಿಟ್ಲದ ಹುಡುಕಾಡುತ್ತಿದ್ದಾಗ ಕುದ್ದುಪದವು ಮೂಲದ ಇಬ್ಬರು ಬಾಲಕಿಯರು ಕಾಣಿಸಿದ್ದು, ಇವರೇ ಮನೆಯಿಂದ ಹೇಳದೇ ಬಂದವರು ಅಂತಾ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಬುರ್ಖಾ ತೆಗೆದಾಗ ಅವರು ಬೇರೆಯವರು ಎಂದು ಗೊತ್ತಾಗಿದೆ. ಕೊನೆಗೆ ಪೇಚಿಗೆ ಸಿಲುಕಿದ್ದಾರೆ. ಬಳಿಕ ಸಾರ್ವಜನಿಕರು ಹಲ್ಲೆ ನಡೆಸಿದವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ‌.

ಇತ್ತ ನಾಪತ್ತೆಯಾಗಿದ್ದ ಇಬ್ಬರು ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರನ್ನು ವಿಟ್ಲ ಠಾಣೆಗೆ ಕರೆಯಿಸಿ, ಬುದ್ದಿವಾದ ಹೇಳಿ ಮನೆಯವರ ಜತೆ ಕಳುಹಿಸಿಕೊಟ್ಟಿದ್ದಾರೆ.

ಹಲ್ಲೆಗೊಳಗಾದ ಇಬ್ಬರು ಬಾಲಕಿಯರು ಆಸ್ಪತ್ರೆಗೆ ದಾಖಲಾಗಿದ್ದು, ವಿಟ್ಲ ಠಾಣೆಯಲ್ಲಿ‌ ದೂರು ದಾಖಲಾಗಿದೆ.

- Advertisement -

Latest News

error: Content is protected !!