Friday, June 5, 2026
Homeಕರಾವಳಿಬಂಟ್ವಾಳ; ಸೈಡ್ ಕೊಡುವ ವಿಚಾರಕ್ಕೆ ಬೈಕ್ ಸವಾರರಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆ

ಬಂಟ್ವಾಳ; ಸೈಡ್ ಕೊಡುವ ವಿಚಾರಕ್ಕೆ ಬೈಕ್ ಸವಾರರಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆ

- Advertisement -
- Advertisement -

ಬಂಟ್ವಾಳ : ಸೈಡ್‌ ಕೊಡಲಿಲ್ಲ ಎಂದು ಬೈಕ್‌ ಸವಾರರು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬಿ.ಸಿ. ರೋಡಿನ ಕೈಕಂಬದಲ್ಲಿ ನಡೆದಿದೆ.

ಬೈಕ್‌ ಸವಾರ ಮಜೀದ್‌ ಹಾಗೂ ಸಹಸವಾರ ಆಜಾದ್‌ ಹಲ್ಲೆ ನಡೆಸಿದ ಆರೋಪಿಗಳು.ಆರೋಪಿಗಳ ವಿರುದ್ಧ ನಿರ್ವಾಹಕ ಉಮೇಶ್‌ ಬಸಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಆರೋಪಿಗಳು ಟಿಕೆಟ್‌ ಮೆಷಿನ್‌ ಹಾಗೂ ಕಿಸೆಯಲ್ಲಿದ್ದ ಹಣವನ್ನು ಎಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!