ಬೆಳ್ತಂಗಡಿ: ಇಲ್ಲಿನ ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ ಐತ ಕೊರಗ ಎಂಬವರಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ಈ ಹಿಂದೆ ಮಂಗಳೂರು&ಉಡುಪಿ ಅರಣ್ಯ ಸಂಚಾರಿ ದಳದ ರೇಂಜರ್ ಅಗಿದ್ದ ಸಂಧ್ಯಾ ಸಚಿನ್ ಪ್ರಸ್ತುತ ಉಡುಪಿ ಅರಣ್ಯ ಸಂಚಾರಿ ದಳದ ರೇಂಜರ್ ಅಗಿ ಕರ್ತವ್ಯದಲ್ಲಿರುವ ಸಂಧ್ಯಾ ಸಚಿನ್ ಸೇರಿ ಮೂವರ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದೆ.
10-12-2021 ರೇಂಜರ್ ಸಂಧ್ಯಾರವರು ಮರ ಕಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ನೋಟೀಸನ್ನು ನೀಡದೇ ಐತ ಕೊರಗ ಅವರ ಸ್ಥಿರಾಸ್ಥಿಗೆ ಅಕ್ರಮ ಪ್ರವೇಶ ಮಾಡಿ ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟದ್ದಲ್ಲದೇ, ತಮ್ಮಲ್ಲಿ ಎಂದು ಹೇಳಿದಾಗ ಐತ ಕೊರಗ ಅವರನ್ನು “ ಕೊರಗ ಜಾತಿಗೆ ಸೇರಿದ ನಿಮ್ಮ ಬುದ್ದಿಯೇ ಇಷ್ಟು, ನಿಮಗೆ ಹೇಗೆ ಬುದ್ದಿ ಕಲಿಸಬೇಕೆಂದು ನನಗೆ ಗೊತ್ತಿದೆ”. ಎಂಬುದಾಗಿ ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ, ಮತ್ತು ಸಂಧ್ಯಾರವರು ಸೇರಿಕೊಂಡು ಐತ ಕೊರಗ ಅವರಿಗೆ ತೊಂದರೆಯನ್ನು ಉಂಟು ಮಾಡುವ ಉದ್ದೇಶದಿಂದ ಸರಕಾರಿ ಸ್ಥಳದಿಂದ ಹಲವು ಮರಗಳನ್ನು ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಡಿದು ಸಾಗಾಟ ಮಾಡಿರುತ್ತಾರೆ. ಎಂದು ಸುಳ್ಳು ವರದಿಯನ್ನು ತಯಾರಿಸಿ ಪ್ರಕರಣ ದಾಖಲಿಸಿರುತ್ತಾರೆ ಎಂದು ಆರೋಪಿಸಿ ಇದೀಗ ರೇಂಜರ್ ಸಂಧ್ಯಾ, ಸಿಬ್ಬಂದಿ ಪ್ರಕಾಶ್ ನಟಾಲ್ಕರ್, ಕ್ಲಿಫರ್ಡ್ ಲೋಬೋ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ.