Wednesday, June 24, 2026
Homeಕರಾವಳಿನೆಲ್ಯಾಡಿ:  ಶ್ರೀರಾಮ ವಿದ್ಯಾಲಯದಲ್ಲಿ ಆಟಿಡೊಂಜಿ ಗೌಜಿ , ಕಾರ್ಗಿಲ್ ವಿಜಯ ದಿವಸ್ ಸಾಮೂಹಿಕ ಹುಟ್ಟುಹಬ್ಬ ,ಆಚರಣೆ

ನೆಲ್ಯಾಡಿ:  ಶ್ರೀರಾಮ ವಿದ್ಯಾಲಯದಲ್ಲಿ ಆಟಿಡೊಂಜಿ ಗೌಜಿ , ಕಾರ್ಗಿಲ್ ವಿಜಯ ದಿವಸ್ ಸಾಮೂಹಿಕ ಹುಟ್ಟುಹಬ್ಬ ,ಆಚರಣೆ

- Advertisement -
- Advertisement -

ನೆಲ್ಯಾಡಿ:ಶ್ರೀರಾಮ ವಿದ್ಯಾಲಯ ಸೂರ್ಯ ನಗರದಲ್ಲಿ  ಜುಲೈ 26ರಂದು ಶನಿವಾರದ  ಸಾಂಸ್ಕೃತಿಕ ದಿನದ ಅಂಗವಾಗಿ ಕಾರ್ಗಿಲ್ ವಿಜಯ ದಿವಸ್, ಸಾಮೂಹಿಕ ಹುಟ್ಟುಹಬ್ಬ, ಆಟಿ ವಿಶೇಷ ಆಟಿಡೊಂಜಿ ಗೌಜಿ, ರಕ್ಷೆಗಳ ಸಿದ್ಧತೆ -ರಕ್ಷೆ ಕಟ್ಟೋಣ ಬನ್ನಿ ಕಾರ್ಯಕ್ರಮಗಳನ್ನು ಆಚರಿಸಲಾಯಿತು.

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ  ಗೋಳಿತೊಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಯುತ  ಬಾಬು ಪೂಜಾರಿ ಕಿನ್ಯಡ್ಕ , ಆಟಿದ ದಿನದ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕುತ್ತಾ ಆಟಿ ತಿಂಗಳ  ವಿಶೇಷತೆ,  ಕಾರ್ಗಿಲ್ ವಿಜಯ ದಿವಸ, ದೇಶದ ರಕ್ಷಣೆ, ಹಿಂದೂ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಸುಬ್ರಾಯ ಪುಣಚ ಇವರು ರಕ್ಷಾ ಬಂಧನ, ಸಂಸ್ಕಾರದೊಂದಿಗೆ ಸಮಾಜದ ಬೆಳವಣಿಗೆಯ ಬಗ್ಗೆ  ವಿವರಿಸಿದರು. ಮುಖ್ಯ ಶಿಕ್ಷಕ ಗಣೇಶ್ ವಾಗ್ಲೆ ಇವರು ಕಾರ್ಗಿಲ್ ದಿವಸದ ಬಗ್ಗೆ ವಿವರವಾಗಿ ತಿಳಿಸಿ ಮಕ್ಕಳಲ್ಲಿ ದೇಶಭಕ್ತಿಯನ್ನು ಇನ್ನಷ್ಟು ಹೆಚ್ಚಿಸಿದರು.

 ಕಾರ್ಯಕ್ರಮದಲ್ಲಿ ಕ್ರೀಡಾ ತರಬೇತುದಾರ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಸಂತೋಷ್ ಕೊಲ್ಯೊಟ್ಟು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಮೇ, ಜೂನ್,ಜುಲೈತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಆರತಿಯನ್ನು ಬೆಳಗಿ, ತಿಲಕವಿಟ್ಟು, ಸಿಹಿ ತಿನ್ನಿಸಿ ಅತಿಥಿಗಳು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಮಧ್ಯಾಹ್ನದ ಭೋಜನಕ್ಕೆ ಆಟಿ ತಿಂಗಳ ವಿಶೇಷ  ತಿನಿಸುಗಳಾದ  ಪತ್ರಡೆ,ತಜಂಕ್,ನುಗ್ಗೆಸೊಪ್ಪು ,ಹಲಸಿನ ಬೀಜದ ಪಲ್ಯ, ಉಪ್ಪಡ್ ಪಚ್ಚಿಲ್,ಕರಿಚೇವ್ ಗಸಿ,ಆಟಿ ಪೊರಿ,ಪಾಯಸದ ಊಟವನ್ನು ಉಣಬಡಿಸಲಾಯಿತು.

ರೋಹಿಣಿ ಮಾತಾಜಿ ಸ್ವಾಗತಿಸಿ, ರಮ್ಯ ಮಾತಾಜಿ ವಂದಿಸಿದರು. ನವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ವಿಶೇಷವಾಗಿ ಎಲ್ಲಾ ಕಾರ್ಯಕ್ರಮಗಳು ತುಳು ಭಾಷೆಯಲ್ಲಿ ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು  ಮೆರುಗು ನೀಡಿತು.

- Advertisement -

Latest News

error: Content is protected !!