Saturday, June 28, 2025
Homeಕರಾವಳಿಉಪ್ಪಿನಂಗಡಿ; ಮುಸ್ಲಿಂ ಸಮುದಾಯದ ಜೋಡಿಯೊಂದರ ಮೇಲೆ ಹಲ್ಲೆಗೆ ಯತ್ನ

ಉಪ್ಪಿನಂಗಡಿ; ಮುಸ್ಲಿಂ ಸಮುದಾಯದ ಜೋಡಿಯೊಂದರ ಮೇಲೆ ಹಲ್ಲೆಗೆ ಯತ್ನ

spot_img
- Advertisement -
- Advertisement -

ಉಪ್ಪಿನಂಗಡಿ; ಮುಸ್ಲಿಂ ಸಮುದಾಯದ ಜೋಡಿಯೊಂದರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೋಲೀಸ್ ಠಾಣೆಯ ಬಾಜಾರು ಎಂಬಲ್ಲಿ ನಡೆದಿದೆ.                                                                                                        
ಒಂದು ವಾರದ ಹಿಂದೆ ನಡೆದ ಘಟನೆಯ ಇದೀಗ ಸೋಷಿಯಲ್  ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಯುವತಿಯನ್ನು ತಡೆದು ನಿಲ್ಲಿಸಿದ ಗುಂಪೊಂದು ಅವರ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಘಟನೆಯ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಧ್ಯಾರ್ಥಿನಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೆ ಯತ್ನಿಸಿದ ಆರೋಪಿಗಳು ಪರಾರಿಯಾಗಿದ್ದು, ಉಪ್ಪಿನಂಗಡಿ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -
spot_img

Latest News

error: Content is protected !!