Saturday, June 6, 2026
Homeಕರಾವಳಿಉಡುಪಿಪಡುಬಿದ್ರೆಯಲ್ಲಿ ನಿವೃತ್ತ ಬಿಎಸ್ಸೆನ್ನೆಲ್‌ ಉದ್ಯೋಗಿಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ

ಪಡುಬಿದ್ರೆಯಲ್ಲಿ ನಿವೃತ್ತ ಬಿಎಸ್ಸೆನ್ನೆಲ್‌ ಉದ್ಯೋಗಿಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ

- Advertisement -
- Advertisement -

ಉಡುಪಿ; ನಿವೃತ್ತ ಬಿಎಸ್ ಎನ್ ಎಲ್  ಉದ್ಯೋಗಿಯನ್ನು ಮರವೊಂದಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.ಪೂಂದಾಡು ನಿವಾಸಿ ಲಕ್ಷ್ಮೀನಾರಾಯಣ ಹಲ್ಲೆಗೊಳಗಾದ ವ್ಯಕ್ತಿ.

 ಲಕ್ಷ್ಮೀನಾರಾಯಣ ಅವರ ಮೇಲೆ ಆರೋಪಿಗಳಾದ ಶೈಲೇಶ್‌, ವಿಠ್ಠಲ್, ರಂಜಿತ್‌ ಹಾಗೂ ಇನ್ನಿಬ್ಬರು ಕೈಯಿಂದ, ಹೆಲ್ಮೆಟ್‌, ಹಾಗೂ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  ಈ ಕುರಿತು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀನಾರಾಯಣ ಅವರ ತಂದೆಯ ತಂಗಿ ಮನೆಯೂ ಇನ್ನಾ ಗ್ರಾಮದ ಗುರ್ಮೇರು ಎಂಬಲ್ಲಿದ್ದು ಅಲ್ಲಿಗೆ ಹೋಗಿದ್ದ ಅವರು ಸೋದರತ್ತೆಯ ಮಗಳು ಮೋಹಿತಾಳ ಚೈನನ್ನು ಪಡೆದು ಮುಂಡ್ಕೂರು ಸಹಕಾರಿ ಸೇವಾ ಸಂಘದಿಂದ 18,000 ರೂ ಸಾಲ ಪಡೆದಿದ್ದರು ಎನ್ನಲಾಗಿದೆ.15,000 ರೂ.ಗಳನ್ನು ಕಿಸೆಯಲ್ಲಿರಿಸಿದ್ದ ಅವರು 3,000 ರೂ.ಗಳನ್ನು ಪರ್ಸ್‌ನಲ್ಲಿರಿಸಿ ಮೈಕ್ರೋವೇವ್‌ ಸ್ಟೇಶನ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ.ಪರ್ಸ್ ನಲ್ಲಿದ್ದ ಹಣ ಆರೋಪಿಗಳು ಸುಲಿಗೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ದುಷ್ಕರ್ಮಿಗಳು ಇವರನ್ನು ಮರಕ್ಕೆ ಕಟ್ಟಿ ಹಾಕಿದ ಅನಂತರ ಸ್ಥಳೀಯರಾದ ಗೀತಾ ಹಾಗೂ ಪ್ರೇಮಾ ಅವರನ್ನು ಘಟನಾ ಸ್ಥಳಕ್ಕೆ ಆರೋಪಿಗಳು ಕರೆಸಿಕೊಂಡಿದ್ದಾರೆ.ಆರೋಪಿಗಳ ಮಾತಿನಂತೆ ಗೀತಾ ಹಾಗೂ ಪ್ರೇಮಾ ಮರಕ್ಕೆ ಕಟ್ಟಿದ್ದ ಲಕ್ಷ್ಮಿ ನಾರಾಯಣರನ್ನು ಬಿಡಿಸಿದ್ದಾರೆ.ಇನ್ನು ಆರೋಪಿಗಳು ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!