Sunday, June 7, 2026
Homeಕರಾವಳಿಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ : ಮಂಗಳೂರು ನಗರ ಉತ್ತರಕ್ಕೆ ಇನಾಯತ್‌ ಅಲಿ ಅಭ್ಯರ್ಥಿ

ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ : ಮಂಗಳೂರು ನಗರ ಉತ್ತರಕ್ಕೆ ಇನಾಯತ್‌ ಅಲಿ ಅಭ್ಯರ್ಥಿ

- Advertisement -
- Advertisement -

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾಕಿ ಉಳಿಸಿಕೊಂಡಿದ್ದ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.

ಅದರಂತೆ ಕಾಂಗ್ರೆಸ್‌ ರಾಯಚೂರು ನಗರ ವಿಧಾಸಭಾ ಕ್ಷೇತ್ರಕ್ಕೆ ಮೊಹಮ್ಮದ್‌ ಶಲಾಂ, ಶಿಡ್ಲಘಟ್ಟ ವಿಧಾಸಭಾ ಕ್ಷೇತ್ರಕ್ಕೆ ಬಿ ವಿ ರಾಜೀವ್‌ ಗೌಡ, ರಾಜಧಾನಿ ಬೆಂಗಳೂರಿನ ಸಿ ವಿ ರಾಮನ್‌ ನಗರ ವಿಧಾನಸಭಾ ಕ್ಷೇತ್ರಕ್ಕೆ (ಪರಿಶಿಷ್ಟ ಜಾತಿ ಮೀಸಲು ) ಎಸ್‌.ಆನಂದ್‌ ಕುಮಾರ್, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಎಚ್‌.ಪಿ ಶ್ರೀಧರ್‌ ಗೌಡ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್‌ ಅಲಿ ಎಂಬುವವರಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಕಾಂಗ್ರೆಸ್‌ ಈ ಬಾರಿಯ ಚುನಾವಣೆಗೆ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆ ಮಾಡಿದಂತಾಗಿದೆ.

- Advertisement -

Latest News

error: Content is protected !!