- Advertisement -
- Advertisement -
ಮೈಸೂರು: ಮಂಗಳೂರಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ದಂಪತಿ ಮೈಸೂರಿನಲ್ಲಿ ಅಪಘಾತಕ್ಕೀಡಾಗಿದ್ದು ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಮೈಸೂರಿನ ಇಲವಾಲದ ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಒಂದು ವರ್ಷ ಎರಡು ತಿಂಗಳ ಪ್ರಾಯದ ಮಗು ಲಿಖಿತ್ ಮೃತಪಟ್ಟಿದ್ದಾನೆ.
ದಿವ್ಯಶ್ರೀ ಮತ್ತು ಅಭಿಷೇಕ್ ಅಪಘಾತಕ್ಕೀಡಾದ ಅಸಿಸ್ಟೆಂಟ್ ಪ್ರೊಫೆಸರ್ ದಂಪತಿಗಳಾಗಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಮೂಲತ: ಮೈಸೂರಿನವರಾದ ಮೃತ ಮಗುವಿನ ತಾಯಿ ದಿವ್ಯಶ್ರೀ ಮತ್ತು ತಂದೆ ಅಭಿಷೇಕ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದರು.
ದಿವ್ಯಶ್ರೀ ತಾಯಿ ಮನೆಯಲ್ಲಿದ್ದ ಮಗುವನ್ನು ನೋಡಲು ವಾರಾಂತ್ಯದಲ್ಲಿ ಮಂಗಳೂರಿನಿಂದ ಮೈಸೂರಿಗೆ ಬಂದಿದ್ದ ದಂಪತಿ, ಮಗು ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
- Advertisement -