Friday, May 3, 2024
Homeಕರಾವಳಿನಮೋ ಮೋಯರ್ ಗ್ಲೋಬಲ್ ಫೌಂಡೇಶನ್‌ನಿಂದ ತವರೂರ ಶಾಲಾ ಮಕ್ಕಳಿಗೆ ನೆರವು

ನಮೋ ಮೋಯರ್ ಗ್ಲೋಬಲ್ ಫೌಂಡೇಶನ್‌ನಿಂದ ತವರೂರ ಶಾಲಾ ಮಕ್ಕಳಿಗೆ ನೆರವು

spot_img
- Advertisement -
- Advertisement -

ಮುಂಬಯಿ : ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಕೇವಲ ಐದು ತಿಂಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದೆ. ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತದೆ. ಈಗಾಗಲೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ.

ನೂರು ವರ್ಷಗಳ ಇತಿಹಾಸವಿರುವ, ಉಚ್ಚಿಲ ಬೋವಿ  ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಂದ ತಮ್ಮ ಶಾಲೆಯ 10 ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಲು ಪರಿಗಣಿಸುವಂತೆ ಸ್ವೀಕರಿಸಿದ ಮನವಿಯ ಆಧಾರದ ಮೇಲೆ, ಈ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು  ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನಿರ್ಧರಿಸಿತು.

ಅ. 29  ರಂದು, ಉಚ್ಚಿಲ ಬೋವಿ ಪ್ರಾಥಮಿಕ ಶಾಲೆಯ 10 ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು.  ಶಾಲಾ ಪ್ರಬಂಧಕರಾದ ರೋಹಿತಾಶ್ವ ಉಚ್ಚಿಲ್ ಮತ್ತು  ಮುಖ್ಯೋಪಾಧ್ಯಾಯನಿ ಮೇಘಲತಾ ಉಚ್ಚಿಲ್  ಅವರು ಮಾತನಾಡಿ, ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ರವರ ಈ ಉದಾತ್ತ ಕಾರ್ಯವನ್ನು ಪ್ರಶಂಸಿಸಿದರು.

 ಅ. 31, ರಂದು ಉದ್ಯಾವರ ಭಗವತಿ ಬೋವಿ ಶಾಲೆಯಲ್ಲಿ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ  ಸ್ಕೂಲ್ ಬ್ಯಾಗ್‌ಗಳು, ನೀರಿನ ಬಾಟಲಿ , ನೋಟ್‌ಬುಕ್‌ಗಳು ಮತ್ತು ಇತರ ಸ್ಟೇಷನರಿ ಕಿಟ್‌ಗಳನ್ನು ವಿತರಿಸಿತು. ಮುಖ್ಯ ಸಲಹೆಗಾರರಾದ  ಈಶ್ವರ ಕೆ.ಐಲ್ ಇವರು ಮಾತನಾಡಿ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಭಾರತದಾದ್ಯಂತ  ಇಂತಹ ಉದಾತ್ತ ಕಾರ್ಯಗಳನ್ನು ನಡೆಸಲು ಪ್ರತಿಜ್ಞೆ ಮಾಡಿದೆ ಎಂದು ನುಡಿದರು.

ಉದ್ಯಾವರ ಭಗವತಿ ಶಾಲೆಯಲ್ಲಿ  ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಸಹಕರಿಸಿದ  ಶಾಲಾ ಪ್ರಬಂಧಕ  ಶ್ರೀನಿವಾಸ್ ಉದ್ಯಾವರ್ ಮತ್ತು ಮುಖ್ಯೋಪಾಧ್ಯಾಯಿನಿ  ಗೀತಾ ಐಲ್ ಅವರಿಗೆ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್  ಧನ್ಯವಾದಗಳನ್ನು ಅರ್ಪಿಸುತ್ತದೆ.

ಗೌರವ ಸಲಹೆಗಾರಾದ ರಘು ಕಾರ್ನವರು,   ಮುಖ್ಯ ಸಲಹೆಗಾರರಾದ  ಈಶ್ವರ ಕೆ. ಐಲ್,  ಉಪಾಧ್ಯಕ್ಷರಾದ  ಶ್ವೇತಾ ಉಚ್ಚಿಲ್,    ಫೌಂಡೇಶನ್ ನ ದಕ್ಷಿಣ ವಲಯ ತಂಡದಿಂದ ಸದಸ್ಯರಾದ ರವೀಂದ್ರ  ಬೆಳ್ಚಪಾಡರು, ಚಿದಾನಂದ ಉದ್ಯಾವರ್,  ಪಾವನ ಕೋಟೆಕಾರ್,  ಚಂಚಲಾಕ್ಷಿ ಉಚ್ಚಿಲ್ ,  ವಿನಿತಾ ಮಂಜೇಶ್ವರ್, ಸಂದೇಶ್ ಐಲ್ ಮತ್ತು  ಅಮಿತಾ ಉಚ್ಚಿಲ್ ಉಪಸ್ಥಿತರಿದ್ದರು.

ಚಿತ್ರ / ವರದಿ : ಈಶ್ವರ ಎಂ. ಐಲ್

- Advertisement -
spot_img

Latest News

error: Content is protected !!