Friday, June 5, 2026
Homeಅಪರಾಧಕಾಸರಗೋಡು: ಪೆಟ್ರೋಲ್ ಬಂಕ್ ಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ- ಇಬ್ಬರು ಆರೋಪಿಗಳು ಅರೆಸ್ಟ್

ಕಾಸರಗೋಡು: ಪೆಟ್ರೋಲ್ ಬಂಕ್ ಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ- ಇಬ್ಬರು ಆರೋಪಿಗಳು ಅರೆಸ್ಟ್

- Advertisement -
- Advertisement -

ಕಾಸರಗೋಡು: ಉಳಿಯತ್ತಡ್ಕದ ಪೆಟ್ರೋಲ್ ಬಂಕ್ ಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇಜ್ಜತ್ ನಗರದ ಹನೀಫ್ ಪಿ . ಎ ( 24) ಮತ್ತು ಚಟ್ಟಂಗುಯಿಯ ಮುಹಮ್ಮದ್ ರಾಫಿ ( 29) ಬಂಧಿತ ಆರೋಪಿಗಳು.

ಶನಿವಾರ ಬೈಕ್ ನಲ್ಲಿ ಬಂದ ಇಬ್ಬರು 50 ರೂ . ಪೆಟ್ರೋಲ್ ಸಾಲ ಕೇಳಿ ನೀಡದಿದ್ದಾಗ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ರಾತ್ರಿ ತಂಡವೊಂದು ಬಂಕ್ ಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ

- Advertisement -

Latest News

error: Content is protected !!