ನವದೆಹಲಿ : ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ರಾಷ್ಟ್ರ ಧ್ವಜದ ಮೇಲೆ ನಿಂತು ನಮಾಜ್ ಮಾಡಿದ ಘಟನೆ ನವದೆಹಲಿ ವಿಮಾನ ನಿಲ್ಧಾಣದಲ್ಲಿ ನಡೆದಿದೆ.
ಅಸ್ಸಾಂನ ದಿಮಾಪುರ್ ನಿವಾಸಿ ಮೊಹಮ್ಮದ್ ತಾರಿಕ್ ಬಂಧಿತ ವ್ಯಕ್ತಿ. ಆತ ದುಬೈನಿಂದ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದು, ಅಲ್ಲಿಂದ ಅಸ್ಸಾಂಗೆ ಹಿಂತಿರುಗುತ್ತಿದ್ದ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಮೊಹಮ್ಮದ್ ತಾರಿಕ್ ನೆಲದ ಮೇಲೆ ಧ್ವಜವನ್ನು ಇಟ್ಟು ನಮಾಜ್ ಮಾಡುತ್ತಿದ್ದರು. ಇದನ್ನು ನೋಡಿದ ಸಿಐಎಸ್‌ಎಫ್ ಸೈನಿಕರು ನೋಡಿದ್ದು, ಅನುಮಾನಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ತಾರಿಕ್ ಅವರನ್ನು ಸಿಐಎಸ್‌ಎಫ್ ವಶಕ್ಕೆ ಪಡೆದಿದ್ದು, ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ದೆಹಲಿ ಪೊಲೀಸರು ಮೊಹಮ್ಮದ್ ತಾರಿಕ್ ನನ್ನು ಬಂಧಿಸಿದ್ದು, ಆತನ ಪಾಸ್ ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಸಿಸಿಟಿವಿಯನ್ನು ಸ್ಕ್ಯಾನ್ ಮಾಡಿದ ಪೊಲೀಸರು ಸಿಐಎಸ್‌ಎಫ್ ದೂರಿನ ಮೇರೆಗೆ ಮೊಹಮ್ಮದ್ ತಾರಿಕ್ ಅಜೀಜ್ ವಿರುದ್ಧ ರಾಷ್ಟ್ರೀಯ ಗೌರವ ಅವಮಾನ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.