- Advertisement -
![]()
- Advertisement -
ಮಂಗಳೂರು; ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡೈಲಾಗ್ ಗಳ ಮೂಲಕವೇ ಸದ್ದು ಮಾಡಿದ್ದ ಆಶಾ ಪಂಡಿತ್ ವಿಧಿವಶರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಶಾ ಪಂಡಿತ್ ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದ್ದರು. ಅವರ ಮುಜು ಮುಸುಂಟ್, ಮರುವಾಯಿ ಮುಸುಂಟ್, ತೇಡೆ ಮುಸುಂಟ್ ಈ ರೀತಿಯ ಡೈಲಾಗ್ ಗಳನ್ನು ಕೇಳೋದೇ ಒಂಥರಾ ಖುಷಿ ಕೊಡುತ್ತಿತ್ತು. ಅಲ್ಲದೇ ಎಲ್ಲರಿಗೂ ಆಶಾಕ್ಕೆ ಅಂತಲೇ ಪರಿಚಿತರಾಗಿದ್ದರು.
ಮಂಗಳೂರಿನ ಪಡೀಲ್ ನಲ್ಲಿ ಪುಟ್ಟ ಕ್ಯಾಂಟೀನ್ ಇರಿಸಿಕೊಂಡು ಜೀವನ ಮಾಡುತ್ತಿದ್ದ ಆಶಾಕ್ಕ ರಂಗಭೂಮಿ ಕಲಾವಿದೆ. ಒಳ್ಳೆಯ ಹಾಡುಗಾರ್ತಿ ಕೂಡ. ನಿನ್ನೆ ರಾತ್ರಿ ಆಶಾ ಪಂಡಿತ್ ಅವರಿಗೆ ಇದ್ದಕ್ಕಿದ್ದಂತೆ ವಾಂತಿಯಾಗಿದ್ದಂತೆ. ಇಂದು ಬೆಳಗ್ಗೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಇವರ ನಿಧನ ಅವರ ಫಾಲೋವರ್ಸ್ ಗೆ ದೊಡ್ಡ ಆಘಾತ ತಂದಿದೆ.
- Advertisement -


