Wednesday, July 15, 2026
Homeಕರಾವಳಿಮಂಗಳೂರುಅರುಣ್ ಕುಮಾರ್ ಪುತ್ತಿಲ ಮತ್ತು ಮಹಿಳೆಯ ಸಂಭಾಷಣೆ ಆಡಿಯೋ ವೈರಲ್ ಪ್ರಕರಣ; ದೂರು ನೀಡಲು ಠಾಣೆಗೆ...

ಅರುಣ್ ಕುಮಾರ್ ಪುತ್ತಿಲ ಮತ್ತು ಮಹಿಳೆಯ ಸಂಭಾಷಣೆ ಆಡಿಯೋ ವೈರಲ್ ಪ್ರಕರಣ; ದೂರು ನೀಡಲು ಠಾಣೆಗೆ ಆಗಮಿಸಿದ ಮಹಿಳೆ

- Advertisement -
- Advertisement -

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಮಹಿಳೆಯ ಸಂಭಾಷಣೆ ಆಡಿಯೋ ವೈರಲ್ ಆದ ಬೆನ್ನಲ್ಲೇ ಆಡಿಯೋದಲ್ಲಿ ಮಾತನಾಡಿರುವ ಮಹಿಳೆಗೆ  ಬೆದರಿಕೆ ಕರೆ ಬರುತ್ತಿರುವುದಾಗಿ ಆರೋಪಿಸಿ ನಿನ್ನೆ ರಾತ್ರಿ ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಗೆ  ದೂರು ನೀಡಲು ಬಂದಿದ್ದರು ಎನ್ನಲಾಗಿದೆ.

ಆಡಿಯೋ ವೈರಲ್ ಬಳಿಕ ಮಹಿಳೆಗೆ ಹಲವಾರು ಬೆದರಿಕೆ ಕರೆ ಬಂದಿದ್ದು, ಈ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಇನ್ಸ್ಪೆಕ್ಟರ್ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ತಡರಾತ್ರಿ ಠಾಣೆಗೆ ಬಂದ ಮಹಿಳೆಯನ್ನು ಬಳಿಕ ಆಟೋ ರಿಕ್ಷಾದಲ್ಲಿ ತೆರಳುವಂತೆ ಸೂಚಿಸಿದ ಪೊಲೀಸರು ಹಿಂದಿನಿಂದ ಪೊಲೀಸ್ ಜೀಪಿನಲ್ಲಿ ಮನೆಯ ತನಕ ಭದ್ರತೆ ನೀಡಿದರು ಎನ್ನಲಾಗಿದೆ.

- Advertisement -

Latest News

error: Content is protected !!