Sunday, June 7, 2026
Homeಕರಾವಳಿಮಂಗಳೂರು : ಬಳ್ಳಾಲ್‌ಬಾಗ್‌ನಲ್ಲಿ ಇಂದಿನಿಂದ ಚಿತ್ರಕಲಾ ಪ್ರದರ್ಶನ!

ಮಂಗಳೂರು : ಬಳ್ಳಾಲ್‌ಬಾಗ್‌ನಲ್ಲಿ ಇಂದಿನಿಂದ ಚಿತ್ರಕಲಾ ಪ್ರದರ್ಶನ!

- Advertisement -
- Advertisement -

ಮಂಗಳೂರು: ಅ.29ರಿಂದ ನ.7ರವರೆಗೆ ನಗರದ ಬಳ್ಳಾಲ್‌ಬಾಗ್‌ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ‘ವಾರಿಯರ್ಸ್ ಆಫ್ ದಿ ಬ್ಲೂ’ ಮೀನುಗಾರರ ಬದುಕನ್ನು ಬಿಂಬಿಸುವ ಚಿತ್ರಕಲಾ ಪ್ರದರ್ಶನ ಕರಾವಳಿ ಚಿತ್ರಕಲಾ ಚಾವಡಿ ವತಿಯಿಂದ ನಡೆಯಲಿದೆ.

ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ‘ಡಾ. ಪ್ರವೀಣ್ ಪುತ್ರ ಹಾಗೂ ಅವರ ಪುತ್ರಿ ಪ್ರಾವ್ಯ ರಚಿಸಿರುವ 30ಕ್ಕೂ ಅಧಿಕ ಪೇಂಟಿಂಗ್‌ಗಳು ಪ್ರದರ್ಶನಗೊಳ್ಳಲಿವೆ. ಅ.29ರ ಸಂಜೆ 5.15ಕ್ಕೆ ಕ್ಯಾಪ್ಟನ್ ವಿ.ಎ. ಪುತ್ರನ್ ಉದ್ಘಾಟನೆ ಮಾಡುವರು. ಮೇಯರ್ ಪ್ರೇಮಾನಂದ ಶೆಟ್ಟಿ’ ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಚಿತ್ರಕಲೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೀನುಗಾರರ ಬದುಕಿನ ಚಿತ್ರಣ ಸೇರಿದಂತೆ ಮೀನುಗಾರಿಕೆಯ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಆಕರ್ಷಕ ಕಲಾಕೃತಿಗಳು ಪ್ರದರ್ಶನದಲ್ಲಿರಲಿವೆ ಎಂದು ತಿಳಿಸಿದರು.

- Advertisement -

Latest News

error: Content is protected !!