Sunday, June 7, 2026
Homeಇತರಶಿಖರದಿಂದ ಸಾಗರದವರೆಗೆ ಯುವತಿಯರ ಸಾಹಸ ಯಾತ್ರೆ..! ಮಲ್ಪೆಗೆ ಆಗಮಿಸಿದ ತಂಡ..!

ಶಿಖರದಿಂದ ಸಾಗರದವರೆಗೆ ಯುವತಿಯರ ಸಾಹಸ ಯಾತ್ರೆ..! ಮಲ್ಪೆಗೆ ಆಗಮಿಸಿದ ತಂಡ..!

- Advertisement -
- Advertisement -

ಉಡುಪಿ: ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ‘ಶಿಖರದಿಂದ ಸಾಗರ’ ಐತಿಹಾಸಿಕ ಯಾನದಲ್ಲಿ ಪಾಲ್ಗೊಂಡಿದ್ದ ಐವರು ಯುವತಿಯರ ತಂಡ ಗುರುವಾರ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದರು.

ಗುರುವಾರ ಮಲ್ಪೆ ಸಮದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಐವರು ಯುವತಿಯರನ್ನು ಇವರನ್ನು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಸ್ವಾಗತಿಸಿದರು.

ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ‘ಶಿಖರದಿಂದ ಸಾಗರ’ ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಯುವತಿಯರು ಕಾಶ್ಮೀರದಲ್ಲಿ 5425 ಮೀಟರ್ ಶಿಖರವನ್ನು ಯಸ್ವಿಯಾಗಿ ಏರಿದರು.

ನಂತರ ಲಡಾಖ್‌ನಿಂದ 3,000 ಕಿ. ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿದರು. ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ. ಮೀ. ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಿದ್ದು, ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದರು.

- Advertisement -

Latest News

error: Content is protected !!