Saturday, June 28, 2025
Homeಕರಾವಳಿಮಂಗಳೂರು: ಟೆಂಪೋ ವಾಹನದಲ್ಲಿ ಗೋಮಾಂಸ ಸಾಗಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

ಮಂಗಳೂರು: ಟೆಂಪೋ ವಾಹನದಲ್ಲಿ ಗೋಮಾಂಸ ಸಾಗಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

spot_img
- Advertisement -
- Advertisement -

ಮಂಗಳೂರು: ಟೆಂಪೋ ವಾಹನದಲ್ಲಿ ಗೋಮಾಂಸ ಸಾಗಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಜರಂಗದಳ ಕಾರ್ಯಕರ್ತರು ತಡೆದು ಗೋಮಾಂಸ ಸಹಿತ ಬಜಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ಬಜ್ಪೆ ಸಮೀಪದ ಗುರುಪುರ ಕೈಕಂಬದ ವಿಕಾಸ್ ನಗರದಲ್ಲಿ ಗುರುವಾರ ನಡೆದಿದೆ. ಕುಪ್ಪೆಪದವು ಅಂದೇಲ್ ನಿವಾಸಿ ಅಜೀಜ್ ಹಾಗೂ ಇನ್ನೋರ್ವ ಬಂಧಿತ ಆರೋಪಿ.

ಇಬ್ಬರು ಮುಸ್ಲಿಂ ವ್ಯಕ್ತಿಗಳು ಟೆಂಪೋ ವಾಹನದಲ್ಲಿ ಗೋಮಾಂಸವನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ವಿಚಾರ ತಿಳಿದ ಸ್ಥಳೀಯ ಬಜರಂಗದಳ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ಬಜಪೆ ಪೊಲೀಸರು ವಾಹನ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರು ಗೋಮಾಂಸವನ್ನು ಮಾಂಸದ ಅಂಗಡಿಗಳಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು ಎಂದು ತಿಳಿಸಿದ್ದಾರೆ.

ಆರೋಪಿಗಳಲ್ಲಿ ವಾಹನ ಚಾಲಕನನ್ನು ಕುಪ್ಪೆಪದವು ಅಂದೇಲ್ ನಿವಾಸಿ ಅಜೀಜ್ ಎಂದು ಈತ ಹಿಂದೆಯೂ ಹಲವು ಪ್ರಕರಣಗಳ ಆರೋಪಿ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!