Monday, June 8, 2026
Homeಕರಾವಳಿಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಕಡಬ: ಪ್ರಕರಣವೊಂದರ  ವಿಚಾರಣೆಗೆ ಹಾಜರಾಗದೇ  ತಲೆ ಮರೆಸಿಕೊಂಡಿದ್ದ ಕುಂತೂರಿನ    ಆರೋಪಿಯನ್ನು  ಕಡಬ ಪೊಲೀಸರು ಬಂಧಿಸಿದ್ದಾರೆ.ಕುಂತೂರಿನ ರಾಜಿಕ್  ಬಂಧಿತ ಆರೋಪಿ. 

ಈತನ ವಿರುದ್ದ 2012 ರಲ್ಲಿ ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಕೋರ್ಟಿನಲ್ಲಿ ನಡೆಯುತ್ತಿತ್ತಾದರೂ, ಆರೋಪಿ ರಾಜಿಕ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ.ಈ ಕಾರಣದಿಂದ ಪುತ್ತೂರಿನ ಸೆಷನ್ ಕೋರ್ಟ್  ಈತನ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಇದೀಗ ಕುಂತೂರಿನ  ಆರೋಪಿಯನ್ನು   ಪೊಲೀಸರು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಗೆ   14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.   ಕಾರ್ಯಾಚರಣೆಯಲ್ಲಿ ಕಡಬ ಎಸ್.ಐ ಆಂಜನೇಯ ರೆಡ್ಡಿ ಹೆಡ್ ಕಾನ್ಸ್ಟೇಬಲ್ ಗಳಾದ ಭವಿತ್ ರೈ ಹಾಗೂ ಹರೀಶ್, ಕಾನ್ಸ್ಟೇಬಲ್ ಗಳಾದ ಮಹೇಶ್ ಹಾಗೂ ಸಿರಾಜುದ್ದೀನ್ ಭಾಗವಹಿಸಿದ್ದರು.

- Advertisement -

Latest News

error: Content is protected !!