Friday, June 26, 2026
Homeಕರಾವಳಿಸುಳ್ಯ : ಐವರ್ನಾಡಿನಲ್ಲಿ ಮನೆಯಲ್ಲಿ ಸುಲಿದಿಟ್ಟ ಅಡಿಕೆ ಕಳವು

ಸುಳ್ಯ : ಐವರ್ನಾಡಿನಲ್ಲಿ ಮನೆಯಲ್ಲಿ ಸುಲಿದಿಟ್ಟ ಅಡಿಕೆ ಕಳವು

- Advertisement -
- Advertisement -

ಸುಳ್ಯ : ಮನೆಯಲ್ಲಿ ಸುಲಿದಿಟ್ಟ ಅಡಿಕೆ ಕಳವು ಮಾಡಿರುವ ಘಟನೆ ಐವರ್ನಾಡು ಸಮೀಪದ ಕುಳ್ಳಂಪಾಡಿಯಲ್ಲಿ ನಡೆದಿದೆ.

ಕುಳ್ಳಂಪಾಡಿ ಗ್ರಾಮ ನಿವಾಸಿ ಹಿರಿಯಣ್ಣ ಗೌಡ (54) ಎಂಬವರು ಮಾರ್ಚ್ 14 ರಂದು ಸಂಜೆ ತನ್ನ ಕುಟುಂಬ ಸಮೇತ ಪುತ್ತೂರು ತಾಲೂಕು ಮಾಡಾವಿನಲ್ಲಿರುವ ತನ್ನ ಅಕ್ಕನ ಮನೆಗೆ ಹೋದವರು ರಾತ್ರಿ ವಾಪಾಸು ಮನೆಗೆ ಬಂದಿದ್ದು, ಮರುದಿನ ಬೆಳಿಗ್ಗೆ ಎದ್ದು, ಕೊಟ್ಟಿಗೆಗೆ ಹೋಗಿ ನೋಡಿದಾಗ ಕೊಟ್ಟಿಗೆಯಲ್ಲಿ ಸುಮಾರು ಒಂದು ವಾರಗಳಿಂದ ಸುಲಿದು ಇಟ್ಟಿದ್ದ 15 ಅಡಿಕೆ ತುಂಬಿದ ಗೋಣಿ ಚೀಲಗಳ ಪೈಕಿ 5 ಅಡಿಕೆ ತುಂಬಿದ ಗೋಣಿ ಚೀಲಗಳು ಕಳ್ಳತನವಾಗಿದೆ.

ಇವುಗಳನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಕಳವಾದ 5 ಗೋಣಿಚೀಲಗಳಲ್ಲಿ ಸುಮಾರು 2.5 ಕ್ವಿಂಟಾಲ್ ಅಡಿಕೆ ಇದ್ದು ಅಂದಾಜು 1 ಲಕ್ಷ ರೂ ಮೌಲ್ಯದ್ದಾಗಿದೆ. ಘಟನೆ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ

- Advertisement -

Latest News

error: Content is protected !!