Wednesday, June 26, 2024
Homeಉದ್ಯಮಸಿಆರ್‌ಝಡ್‌ ಮರಳಿಗೆ 3 ತಿಂಗಳಲ್ಲಿ ವ್ಯವಸ್ಥೆ ಮಾಡಿ; ವಿಧಾನಸಭಾಧ್ಯಕ್ಷ ಖಾದರ್‌ ಸೂಚನೆ

ಸಿಆರ್‌ಝಡ್‌ ಮರಳಿಗೆ 3 ತಿಂಗಳಲ್ಲಿ ವ್ಯವಸ್ಥೆ ಮಾಡಿ; ವಿಧಾನಸಭಾಧ್ಯಕ್ಷ ಖಾದರ್‌ ಸೂಚನೆ

spot_img
- Advertisement -
- Advertisement -

ಮಂಗಳೂರು:  ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಿಆರ್‌ಝಡ್‌ ಪ್ರದೇಶದಲ್ಲಿ ಮರಳು ತೆಗೆಯುವುದಕ್ಕೆ ಪೂರಕವಾದ ಪ್ರಕ್ರಿಯೆಗಳನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಿ, ಮರಳಿಗೆ ಯಾವುದೇ ಸಮಸ್ಯೆಯಾಗ ದಂತೆ ಜಿಲ್ಲಾಡಳಿತ, ಗಣಿ ಇಲಾಖೆ ನೋಡಿಕೊಳ್ಳಬೇಕು ಎಂದು ನಿರ್ಧಾರ ಹೊರಡಿಸಲಾಗಿದೆ.  

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸ್ಪೀಕರ್‌ ಖಾದರ್‌ ಅವರು, ಜನರ ಸಮಸ್ಯೆಗೆ ಸ್ಪಂದಿಸಿ ಮರಳಿನ ಸಮಸ್ಯೆ ನಿವಾರಿಸಬೇಕು, ಉತ್ತರಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳು ತೆಗೆಯಲು ಅನುಮತಿ ನೀಡಿರುವಾಗ ನಮ್ಮಲ್ಲಿ ಯಾಕೆ ಸಾಧ್ಯ ವಾಗಿಲ್ಲ ಎಂದು ಪ್ರಶ್ನಿಸಿದರು.

ಸಿಆರ್‌ಝಡ್‌ ಪ್ರದೇಶದ ಮರಳು ತೆಗೆಯುವುದು 2023ರ ಮೇ ತಿಂಗಳ ಬಳಿಕ ಜಿಲ್ಲೆಯಲ್ಲಿ ಸಾಧ್ಯವಾಗಿಲ್ಲ. ಹೊಸ ಸಿಆರ್‌ಝಡ್‌ ನಿಯಮಗಳು ಜಾರಿಗೆ ಬಂದಿದ್ದರೂ ಮರಳು ತೆರವಿನ ಕುರಿತು ಮಾರ್ಗಸೂಚಿಗಳು ಇನ್ನೂ ಬಾರದಿರುವುದರ ಹಿನ್ನೆಲೆಯಲ್ಲಿ ಮರಳು ತೆಗೆಯುವುದಕ್ಕೆ ಜಿಲ್ಲಾಡಳಿತ ಅನುಮೋದನೆ ನೀಡಿಲ್ಲ. 3 ತಿಂಗಳಲ್ಲಿ ನಿಷೇಧ ಪೂರ್ಣಗೊಳ್ಳು ತ್ತದೆ. ಅಷ್ಟು ಹೊತ್ತಿಗೆ ಮರಳು ತೆಗೆ ಯಲು ಬೇಕಾದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ದ.ಕ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

- Advertisement -
spot_img

Latest News

error: Content is protected !!