Wednesday, June 3, 2026
Homeಕರಾವಳಿಮಂಗಳೂರು: ಖಾಸಗಿ ಬಸ್ ನಲ್ಲಿ ಯುವತಿಗೆ ಕಿರುಕುಳ; ಯುವಕನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಮಂಗಳೂರು: ಖಾಸಗಿ ಬಸ್ ನಲ್ಲಿ ಯುವತಿಗೆ ಕಿರುಕುಳ; ಯುವಕನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

- Advertisement -
- Advertisement -

ಮಂಗಳೂರು: ಖಾಸಗಿ ಬಸ್ ನಲ್ಲಿ ಯುವತಿಗೆ ಕಿರುಕುಳ ನೀಡಿದ ಯುವಕನಿಗೆ ಸಾರ್ವಜನಿಕರು  ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ಬಳಿ ನಡೆದಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪೆನಿಯೊಂದರ ಪ್ರಾಡಕ್ಟ್ ಸೇಲ್‌ ಕೆಲಸ ಮಾಡುವ ಯುವತಿಯೊಬ್ಬಳು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕಚೇರಿಗೆ ಹೋಗಿ ಪ್ರಾಡಕ್ಟ್ಗಳನ್ನು ಪಡೆದು ಅದನ್ನು ಮಾರಾಟ ಮಾಡಲು ನಾಗುರಿಯಿಂದ ಬಸ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಸ್ಟೇಟ್‌ ಬ್ಯಾಂಕ್‌ಗೆ ಬಂದಿದ್ದರುಳು ಸ್ಟೇಟ್‌ ಬ್ಯಾಂಕ್‌ನಿಂದ ಬಜಪೆ ಕಡೆಗೆ ಹೋಗಲು ಖಾಸಗಿ ಬಸ್‌ನಲ್ಲಿ ಕುಳಿತಿದ್ದರುಳು. ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು 27ರಿಂದ 28 ವರ್ಷ ವಯಸ್ಸಿನ ಯುವಕನೊಬ್ಬ ಆಕೆಯ ಹಿಂಬದಿಯ ಸೀಟಿನಲ್ಲಿ ಕುಳಿತು ಟಕ್ಕೆ ಕೈ ಹಾಕಿ ಎಳೆದಿದ್ದಾನೆ ಕೂಡಲೇ ಯುವತಿ ಕಿರುಚಿದ್ದು ಸಹ ಪ್ರಯಾಣಿಕರು ಹಾಗೂ ಸಾರ್ವಜನಿಕರು ಧರ್ಮದೇಟು ಕೊಟ್ಟು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!