Saturday, May 11, 2024
Homeಕರಾವಳಿಅಡಿಕೆ ಕದ್ದು ಗುಡ್ಡೆಯಲ್ಲಿ ರಾಜರೋಷವಾಗಿ ಸುಲಿಯುತ್ತಿದ್ದ ಕಳ್ಳರನ್ನು ಹಿಡಿದ ಸ್ಥಳೀಯರು

ಅಡಿಕೆ ಕದ್ದು ಗುಡ್ಡೆಯಲ್ಲಿ ರಾಜರೋಷವಾಗಿ ಸುಲಿಯುತ್ತಿದ್ದ ಕಳ್ಳರನ್ನು ಹಿಡಿದ ಸ್ಥಳೀಯರು

spot_img
- Advertisement -
- Advertisement -

ಬೆಳ್ತಂಗಡಿ: ಅಡಿಕೆಯನ್ನು ಕದ್ದು ತಂದು ಸಾರ್ವಜನಕರು ಓಡಾಡುವ ಗುಡ್ಡದಲ್ಲಿ ಸುಲಿಯುತ್ತಿದ್ದ ಕಳ್ಳರ ಗ್ಯಾಂಗ್ ನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿಯ ಮಚ್ಚಿನ ಗ್ರಾಮದ ಪುಂಚಪಾದೆಯಲ್ಲಿ ನಡೆದಿದೆ.

ಇಲ್ಲಿನ ಗುಡ್ಡವೊಂದರಲ್ಲಿ ಕಳ್ಳರು 50 ಕೆಜಿಗೂ ಅಧಿಕ ಒಣ ಅಡಿಕೆಯನ್ನು ಶೇಖರಿಸಿಟ್ಟಿದ್ದರು. ಅಲ್ಲದೇ ರಾತ್ರಿ ವೇಳೆ ಅದನ್ನು ಸುಲಿಯುತ್ತಿದ್ದರು.ಇಂದು ಬೆಳಗ್ಗೆ 7 ಗಂಟೆ ವೇಳೆ ಸ್ಥಳೀಯರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಹಿಡಿದು ಪುಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದಾರೆ, ಪಾಂಡವರಕಲ್ಲಿನ ಇಬ್ಬರು ಹಾಗೂ ತೆಕ್ಕಾರಿನ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಓರ್ವ ತಪ್ಪಿಸಿಕೊಂಡಿದ್ದ.  ಬಳಿಕ ಆತನನ್ನು ಕುದ್ರಡ್ಕ ಬಳಿ ಹಿಡಿದಿದ್ದಾರೆ.

ಇನ್ನು ಇದರ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರಬೇಕು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಇಲ್ಲಿನ ಪಿಲಿಗೂಡು,ದೇವರಪಲ್ಕೆ ಮುಂತಾದ ಕಡೆಗಳಿಂದ ಅಡಿಕೆ ನಾಪತ್ತೆಯಾಗುತ್ತಿತ್ತು. ಇದರ ಹಿಂದೆ ಈ ಕಳ್ಳರ ಕೈವಾಡವಿದೆ ಎಂದು ಸ್ಛಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.ಇದೀಗ ಕಳ್ಳರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -
spot_img

Latest News

error: Content is protected !!