ಸುಳ್ಯ; ಆತ್ಮಹತ್ಯೆಗೆ ಯತ್ನಿಸಿದ ಅಡಿಕೆ ವ್ಯಾಪಾರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕೋಲ್ಚಾರಿನ ಅಭಿಲಾಷ್ ಕೊಲ್ಲರಮೂಲೆ (29) ಮೃತ ಅಡಿಕೆ ವ್ಯಾಪಾರಿ.
ಅಭಿಲಾಷ್ ಸುಳ್ಯದ ಗಾಂಧಿನಗರದಲ್ಲಿ ಪಾಲುದಾರಿಕೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಅಲ್ಲದೇ ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಅಂಗಡಿಯ ಲೆಕ್ಕಚಾರ ವ್ಯವಹಾರವೂ ಅಭಿಲಾಷ್ ಅವರೇ ನೋಡಿಕೊಳ್ಳುತ್ತಿದ್ದರು. ಇನ್ನು ಅಭಿಲಾಷ್ ಅವರ ಅಡಿಕೆ ಅಂಗಡಿಯಿಂದ ಉತ್ತರಭಾರತದ ಕಡೆಗೆ ಅಡಿಕೆ ಹೋಗಿತ್ತು. ಆದರೆ ಅಡಿಕೆ ಖರೀದಿಸಿದ ಸೇಟುಗಳು ಹಣ ನೀಡದೇ ವಂಚಿಸಿದ್ದರು. ಇನ್ನು ಅಭಿಲಾಷ್ ತಾವು ಅಡಿಕೆ ಖರೀದಿಸಿದ ಅಡಿಕೆ ಮಾರಾಟಗಾರರಿಗೆ ಹಣ ನೀಡಲು ಸಾಕಷ್ಟು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಕೊನೆಗೆ ಹಣ ಹೊಂದಿಸಲಾಗದೇ ವಿಷ ಸೇವಿಸಿ ಅಭಿಲಾಷ್ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ನಿನ್ನೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇನ್ನು ಗುಜರಾತ್ ನ ಅಡಿಕೆ ಸೇಟುಗಳು ಕರಾವಳಿಯ ಅನೇಕ ಅಡಿಕೆ ವ್ಯಾಪಾರಸ್ಥರಿಗೆ ಹಣ ನೀಡದೇ ವಂಚಿಸಿದ್ದಾರೆ.ಆದರೆ ಅವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.