- Advertisement -
- Advertisement -
ಬಂಟ್ವಾಳ; ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಮುಚ್ಚಿರಪದವು ಎಂಬಲ್ಲಿ ಬುಧವಾರ ಬೆಳಗ್ಗೆ ಮಕ್ಕಳು ಕರೆದೊಯ್ಯುತ್ತಿದ್ದ ಕಾರು ಅಪಘಾತವಾಗಿದೆ.
ಪೆರುವಾಯಿ ಮಿತ್ತಮೂಲೆ ಎಂಬಲ್ಲಿಂದ ವಿಟ್ಲದ ಶಾಲೆಗೆ ತೆರಳುವ ಮಕ್ಕಳನ್ನು ವಿಟ್ಲಕ್ಕೆ ಹೋಗುವ ಬಸ್ಸಿಗೆ ಹತ್ತಿಸಲು ಕರೆದೊಯ್ದುತ್ತಿದ್ದ ವೇಳೆ ಅಪಘಾತವಾಗಿದೆ. ಬ್ರೇಕ್ ವೈಫಲ್ಯಕ್ಕೀಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಮಧ್ಯೆ ಪಲ್ಟಿಯಾಗಿದೆ. ಕಾರು ಚಾಲಕ ಮುಳಿಯ ರಾಮಣ್ಣ ಎಂಬವರ ತಲೆಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
- Advertisement -