- Advertisement -
- Advertisement -
ಮುಂಬೈ: ಐಶ್ವರ್ಯಾ ರೈ ಪುತ್ರಿ ಆರಾಧ್ಯಗೆ ಈಗ 9 ವರ್ಷ. ನವೆಂಬರ್ 16ರಂದು ಆರಾಧ್ಯ ಬಚ್ಚನ್ ಬರ್ತ್‌ಡೇ ಆಚರಿಸಿದ್ದಾರೆ. ಮಗಳಿಗೆ ಐಶ್ವರ್ಯಾ ರೈ ಬಹಳ ಮುದ್ದಾಗಿ ಭಾವತುಂಬಿ ವಿಶ್ ಮಾಡಿದ್ದಾರೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಮಗಳಾದ ಆರಾಧ್ಯ ಅಮ್ಮನ ಮುದ್ದಿನ ಮಗಳು.
ಐಶ್ವರ್ಯಾ ಪುತ್ರಿ ಆರಾಧ್ಯ ಮತ್ತು ಪತಿಯ ಜೊತೆಗಿನ ಸುಂದರವಾದ ಫೋಟೋ ಶೇರ್ ಮಾಡಿದ್ದಾರೆ.ಆರಾಧ್ಯಳನ್ನು ತನ್ನ ಬದುಕಿನ ಅಬ್ಸಲ್ಯೂಟ್ ಲವ್ ಎಂದಿರುವ ನೀಲಿ ಕಣ್ಣಿನ ಚೆಲುವೆ, ಡಾರ್ಲಿಂಗ್ ಏಜಂಲ್ ಆರಾಧ್ಯಗೆ ಹ್ಯಾಪಿ ಬರ್ತ್‌ಡೇ ಎಂದು ವಿಶ್ ಮಾಡಿದ್ದಾರೆ. ನನ್ನ ಬದುಕಿನಲ್ಲಿ ನಿನಗಾಗಿ ಉಸಿರಾಡುವ ಪ್ರತಿ ಕ್ಷಣಕ್ಕೂ ನಾನು ಧನ್ಯೆ ಎಂದು ಅವರು ಬರೆದುಕೊಂಡಿದ್ದಾರೆ.
- Advertisement -