Monday, June 8, 2026
Homeಕರಾವಳಿಮಂಗಳೂರುಪುತ್ತೂರು; ಸರಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ಪುತ್ತೂರು; ಸರಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

- Advertisement -
- Advertisement -

ಪುತ್ತೂರು; ಮುಂಡೂರು ಗ್ರಾಮ ಪಂಚಾಯತ್ ನ ಅಭಿವೃದ್ದಿ ಅಧಿಕಾರಿಯವರು ದಿನಾಂಕ 29.04.2025 ರಂದು ಪುತ್ತೂರು ತಾಲೂಕು ಮುಂಡೂರು ಗ್ರಾಮದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ಗ್ರಾಮದ ಕಾಡಬಾಗಿಲು ಅಲೇಖಿ ಬಾವ ಪಂಚಾಯತ್ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲು ಕಾಮಗಾರಿ ಆರಂಭಿಸುವ ಸಮಯ ಸುಮಾರು 10.30 ಗಂಟೆಗೆ ಕಾಡಬಾಗಿಲು ಅಲೇಖಿ ಬಾವ ಬದಿಯಲ್ಲಿರುವ ಮನೆಯ ಸಾರ್ವಜನಿಕರಾದ ದೇವಪ್ಪ, ಗುರವ, ಬೇಬಿ, ಜನಾರ್ಧನ, ಮೋಹನ ಮತ್ತು ಇನ್ನಿತರರು ಸೇರಿ ಕಾಮಗಾರಿ ಗೆ ಅಡ್ಡಿ ಪಡಿಸಿದ್ದು,ಕರ್ತವ್ಯ ನಿರತರಾದ ದೂರುದಾರರನ್ನು ಮತ್ತು ಅಧಿಕಾರಿ ಸಿಬ್ಬಂದಿಯವರನ್ನು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದಂತೆ ಪಿರ್ಯಾದುದಾರರನ್ನು ತಳ್ಳುತ್ತಿರುವಾಗ ಸ್ಥಳದಲ್ಲಿದ್ದ ಪೋಲಿಸರು ರಕ್ಷಿಸಿದ್ದು ಜೊತೆಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಅವಾಚ್ಯ ಶಬ್ದಗಳಿಂದ ಬೈದು ದೂರುದಾರರಿಗೆ ಕರ್ತವ್ಯ ನಿರ್ವಹಿಸದಂತೆ ತಡೆದು, ಜೀವ ಬೆದರಿಕೆ ಹಾಕಿ ದೂರುದಾರರ  ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆ, ಸಂಪ್ಯ ಇಲ್ಲಿಗೆ ದೂರು ನೀಡಿದ್ದು ದೂರಿನ ಅನ್ವಯ ಪೋಲಿಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 126, 132, 351(2)  ಮತ್ತು 3(5)  ರಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಆರೋಪಿಗಳು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಎಲ್ಲ ಐವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿ ಆದೇಶೀಸಿದೆ. ಆರೋಪಿಗಳ ಪರ ಚಾಣಕ್ಯ ಲಾ ಚೇಂಬರ್ ನ ಶ್ಯಾಮ್ ಪ್ರಸಾದ್  ಕೈಲಾರ್ ವಾದಿಸಿದ್ದರು.

- Advertisement -

Latest News

error: Content is protected !!