Wednesday, June 3, 2026
Homeಕರಾವಳಿಉಡುಪಿಬೈಂದೂರು: ನಿಲ್ಲಿಸಿದ್ದ ಬೈಕ್‌ಗೆ ವೇಗವಾಗಿ ಬಂದ ಮತ್ತೊಂದು ಬೈಕ್‌ ಡಿಕ್ಕಿ: ಗಂಭೀರ ಗಾಯಗೊಂಡ ಸವಾರ ಮೃತ್ಯು

ಬೈಂದೂರು: ನಿಲ್ಲಿಸಿದ್ದ ಬೈಕ್‌ಗೆ ವೇಗವಾಗಿ ಬಂದ ಮತ್ತೊಂದು ಬೈಕ್‌ ಡಿಕ್ಕಿ: ಗಂಭೀರ ಗಾಯಗೊಂಡ ಸವಾರ ಮೃತ್ಯು

- Advertisement -
- Advertisement -

ಬೈಂದೂರು: ನಿಲ್ಲಿಸಿದ್ದ ಬೈಕ್‌ಗೆ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿಯ ಬಳಿ ನಡೆದಿದೆ.

ಅಣ್ಣಪ್ಪ ಪೂಜಾರಿ ಮೃತಪಟ್ಟವರು. ಅಣ್ಣಪ್ಪ ಪೂಜಾರಿ ಬೈಕ್‌ ನಿಲ್ಲಿಸಿ ನಿಂತಿದ್ದಾಗ ಕುಂದಾಪುರ ಕಡೆಯಿಂದ ವೇಗದಲ್ಲಿ ಬಂದ ಬೈಕೊಂದು ಡಿಕ್ಕಿ ಹೊಡೆದು ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅಣ್ಣಪ್ಪ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!