Wednesday, June 24, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲು; ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಎಸ್ಕೇಪ್

ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲು; ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಎಸ್ಕೇಪ್

- Advertisement -
- Advertisement -

ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲಾಗಿದೆ. ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಎಸ್ಕೇಪ್ ಆಗಿರೋದು ಬೆಳಕಿಗೆ ಬಂದಿದೆ.

ಸುರತ್ಕಲ್‌ನಲ್ಲಿರುವ ಮುಕ್ಕ ಕಾಲೇಜಿನಲ್ಲಿ ಕ್ರಿಮಿನಾಲಜಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡು ಆರ್.ಡಿ‌. ನಗರದ ಮೀಪುಗುರಿ ನಿವಾಸಿ ವೈಶಾಲಿ(23) ಎಂಬಾಕೆ  ಕಾನಾದ ಡಾ. ಸುರೇಶ್ ಎಂಬವರ ಪಿಜಿಯಲ್ಲಿ ವಾಸ್ತವ್ಯವಿದ್ದಳು ಎನ್ನಲಾಗಿದೆ.

ಫೆ‌.7ರಂದು ವೈಶಾಲಿಯು ಮೊಹಮ್ಮದ್ ಮಿದ್ಲಾಜ್ ಪಿ.ಹೆಚ್. ಎಂಬ ಅನ್ಯಕೋಮಿನ ಯುವಕನೊಂದಿಗೆ ಕೇರಳದ ವಯನಾಡ್ ರಿಜಿಸ್ಟರ್ ಆಫೀಸಿನಲ್ಲಿ ಜ.31ರಂದು ರಿಜಿಸ್ಟರ್ ಮದುವೆಯಾಗಿರುವ ಬಗ್ಗೆ ವಾಟ್ಸಾಪ್ ಸಂದೇಶ ವೈಶಾಲಿಯ ಸಂಬಂಧಿ ಹರಿದಾಸ್ ಎಂಬವರು ಗಮನಿಸಿದ್ದರು. ಆ ಸಂದೇಶವನ್ನು ಅವರು ವೈಶಾಲಿಯ ಹೆತ್ತವರಿಗೆ ಕಳುಹಿಸಿಕೊಟ್ಟಿದ್ದರು. ಆದ್ದರಿಂದ ಅವರು ಪುತ್ರಿಗೆ ಕರೆ ಮಾಡಿ ಮಾತನಾಡಿದ್ದು, ಬಳಿಕ ಮತ್ತೊಮ್ಮೆ ಫೋನ್ ಮಾಡಿದಾಗ ವೈಶಾಲಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ‌.

 ಆಕೆ ಫೆ.8ರಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಜೊತೆಗೆ ಆಕೆ ವಾಸ್ತವ್ಯವಿರುವ ಪಿಜಿಗೆ ಮನೆಯವರು ಬಂದು ನೋಡಿದಾಗ ಅಲ್ಲೂ ಆಕೆ ಪತ್ತೆಯಾಗಿಲ್ಲ. ಆದ್ದರಿಂದ ಪಿಜಿ ಮಾಲೀಕರ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಫೆ‌.9ರಂದು ಪಿಜಿಯಿಂದ ತೆರಳಿರುವುದು ಗೊತ್ತಾಗಿದೆ. ಇದೀಗ ಕಾಣೆಯಾದ ಆಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ಹೆತ್ತವರು  ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!