Thursday, June 4, 2026
Homeತಾಜಾ ಸುದ್ದಿಪಂಜಿಕಲ್ಲಿನಲ್ಲಿ ಮತ್ತೆ ಭೂಕುಸಿತ: ಸ್ಥಳದಲ್ಲಿದ್ದ ನಾಲ್ವರ ಜೀವ ಉಳಿಸಿದ ರಕ್ಷಣಾ ತಂಡ

ಪಂಜಿಕಲ್ಲಿನಲ್ಲಿ ಮತ್ತೆ ಭೂಕುಸಿತ: ಸ್ಥಳದಲ್ಲಿದ್ದ ನಾಲ್ವರ ಜೀವ ಉಳಿಸಿದ ರಕ್ಷಣಾ ತಂಡ

- Advertisement -
- Advertisement -

ಪಂಜಿಕಲ್ಲು: ಪಂಜಿಕಲ್ಲಿನ ಮುಕುಡ ಎಂಬಲ್ಲಿ ಜುಲೈ 6ರಂದು ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ಇನ್ನೂ ಹಸಿರಾಗಿರುವಂತೆಯೇ ಮತ್ತೆ ಭಾನುವಾರ ಸಂಜೆ ಭೂಕುಸಿತ ಉಂಟಾಗಿದೆ ಎಂದು ಪಿಡಿಒ ವಿದ್ಯಾ ಶಿವಾನಂದ್ ತಿಳಿಸಿದ್ದಾರೆ.

ಭಾನುವಾರ ಸಂಜೆ ಘಟನಾ ಸ್ಥಳಕ್ಕೆ ಸೂಚನೆ ಹೊರತಾಗಿಯೂ ಸಾರ್ವಜನಿಕರು ಬರುತ್ತಿದ್ದರು, ತಾಲೂಕು ಆಡಳಿತ ಮತ್ತು ಸ್ಥಳೀಯ ಆಡಳಿತದ ಎಚ್ಚರಿಕೆಯ ಹೊರತಾಗಿಯೂ ಘಟನಾ ಸ್ಥಳ ವೀಕ್ಷಣೆಗೆ ಜನರು ಹೋಗುತ್ತಿರುವ ವಿಷಯ ತಿಳಿದು ತಕ್ಷಣ ಕಾರ್ಯಪ್ರವತ್ತರಾದ ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾರಾಮು, ಆರಕ್ಷಕ ಇಲಾಖೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ತುರ್ತು ಸೇವಾ ತಂಡ ದೊಡ್ಡ ಅನಾಹುತವೊಂದನ್ನು ತಪ್ಪಿಸಿದೆ ಎಂದವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್‌ ಅಧ್ಯಕ್ಷ ಸಂಜೀವ ಪೂಜಾರಿ ಸೂಚನೆ ಮೇರೆಗೆ ಸ್ಥಳೀಯ ಸದಸ್ಯರಾದ ಮೋಹನ್ ದಾಸ್, ತುರ್ತು ಸೇವಾ ತಂಡದ ಸದಸ್ಯರಾದ ಯಶವಂತ್ ಜೋರಾ ಹಾಗೂ ಆರಕ್ಷಕ ಸಿಬ್ಬಂದಿ ಶೇಖ‌ರ್, ಮಹೇಂದ್ರ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ನಾಲ್ಕು ಮಂದಿಯನ್ನು ತೆರವುಗೊಳಿಸಲಾಗಿದೆ. ಅದಾಗಿ ಕೆಲವೇ ಕ್ಷಣಗಳಲ್ಲಿ ಗುಡ್ಡ ಕುಸಿದು ಬಿದ್ದಿದೆ ಎಂದು ಪಿಡಿಒ ವಿದ್ಯಾ ಶಿವಾನಂದ್‌ ತಿಳಿಸಿದ್ದಾರೆ.

- Advertisement -

Latest News

error: Content is protected !!