Monday, May 20, 2024
Homeತಾಜಾ ಸುದ್ದಿಜೀವ ಬೆದರಿಕೆಗಳು ಬರುತ್ತಿವೆ: ಸುಪ್ರೀಂಕೋರ್ಟ್‌ಗೆ ನೂಪುರ್ ಶರ್ಮಾ ಮತ್ತೊಂದು ಅರ್ಜಿ: ಸಂಭಾವ್ಯ ಬಂಧನದಿಂದ ರಕ್ಷಣೆ ನೀಡುವಂತೆ...

ಜೀವ ಬೆದರಿಕೆಗಳು ಬರುತ್ತಿವೆ: ಸುಪ್ರೀಂಕೋರ್ಟ್‌ಗೆ ನೂಪುರ್ ಶರ್ಮಾ ಮತ್ತೊಂದು ಅರ್ಜಿ: ಸಂಭಾವ್ಯ ಬಂಧನದಿಂದ ರಕ್ಷಣೆ ನೀಡುವಂತೆ ಮನವಿ

spot_img
- Advertisement -
- Advertisement -

ಹೊಸದಿಲ್ಲಿ: ಸಂಭಾವ್ಯ ಬಂಧನದಿಂದ ತಮಗೆ ರಕ್ಷಣೆ ನೀಡುವಂತೆ ಮತ್ತು ತಮ್ಮ ವಿರುದ್ಧ ದಾಖಲಾದ ಎಲ್ಲ 9 ಪ್ರಕರಣಗಳನ್ನು ಒಂದುಗೂಡಿಸುವಂತೆ ಕೋರಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರವಾದಿ ಮಹಮ್ಮದ್ ಕುರಿತಾದ ವಿವಾದಾತ್ಮಕ ಹೇಳಿಕೆ ಬಳಿಕ ದೇಶಾದ್ಯಂತ ಗಲಭೆ, ಹಿಂಸಾಚಾರ ಉಂಟಾಗಲು ನೂಪುರ್ ಶರ್ಮಾ ಅವರೇ ಕಾರಣ ಎಂದು ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಜುಲೈ 1ರಂದು ತರಾಟೆಗೆ ತೆಗೆದುಕೊಂಡಿತ್ತು. ಈಗ ಅವರ ಹೊಸ ಅರ್ಜಿಯನ್ನು ಇದೇ ಪೀಠ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ನೂಪುರ್ ಶರ್ಮಾ ವಿರುದ್ಧ ದಿಲ್ಲಿಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿತ್ತು. ಬಳಿಕ ದೇಶದ ಅನೇಕ ಭಾಗಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇದೆಲ್ಲವೂ ಒಂದೇ ಆರೋಪ ಮತ್ತು ಸೆಕ್ಷನ್‌ಗಳ ಅಡಿಯಲ್ಲಿ ಇರುವುದರಿಂದ ದಿಲ್ಲಿಯಲ್ಲಿ ದಾಖಲಾದ ಪ್ರಕರಣಗಳ ಜತೆಗೆ ಸೇರಿಸುವಂತೆ ಅವರು ಕೋರಿದ್ದಾರೆ. ಅರ್ಹತೆ ಆಧಾರದಲ್ಲಿ ಪ್ರಕರಣವನ್ನು ಬೇಗನೆ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮತ್ತು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೂಡ ಅವರು ಮನವಿ ಮಾಡಿದ್ದಾರೆ.

ಸುಪ್ರೀಂಕೋರ್ಟ್ ತಮ್ಮ ಹೇಳಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮರು ದಿನ ಜುಲೈ 2ರಂದು ಕೋಲ್ಕತಾ ಪೊಲೀಸರು ತಮ್ಮ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದರು. ಇದರಿಂದ ತಮಗೆ ಬಂಧನ ಭೀತಿ ಎದುರಾಗಿದೆ ಎಂದು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿಕೆ ನೀಡಿದ ಸಂದರ್ಭದಿಂದ ನೂಪುರ್ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಗಂಭೀರ ಜೀವ ಬೆದರಿಕೆ ಪ್ರಕರಣಗಳು ಬರುತ್ತಿವೆ. ಅರ್ಜಿದಾರರು ಪಶ್ಚಿಮ ಬಂಗಾಳಕ್ಕೆ ಹೋಗಿ , ಅಲ್ಲಿನ ಕೋರ್ಟ್‌ಗಳಲ್ಲಿ ವಿಚಾರಣೆ ಎದುರಿಸುವುದು ಸಂಪೂರ್ಣ ಸುರಕ್ಷಿತವಲ್ಲ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಜ್ಮೀರ್ ದರ್ಗಾದ ಖಾದಿಮ್ ವಿಡಿಯೋ ಸಂದೇಶದಲ್ಲಿ ನೀಡಿದ ಜೀವ ಬೆದರಿಕೆಯನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ಶರ್ಮಾ ಅವರ ಕತ್ತು ಕತ್ತರಿಸುವಂತೆ ಎಲ್ಲ ಮುಸ್ಲಿಮರಿಗೂ ಕರೆ ನೀಡಿರುವ ಖಾದಿಮ್, ಅವರ ತಲೆಯನ್ನು ತಂದುಕೊಟ್ಟವರಿಗೆ ತನ್ನ ಮನೆಯನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದಿದ್ದಾನೆ ಎಂದು ತಿಳಿಸಲಾಗಿದೆ.

ಈ ಹಿಂದಿನ ಅರ್ಜಿಯಲ್ಲಿ ಕೂಡ ಅವರು, ಎಲ್ಲ ಒಂಬತ್ತು ಎಫ್‌ಐಆರ್‌ಗಳನ್ನು ದಿಲ್ಲಿಗೆ ವರ್ಗಾಯಿಸುವಂತೆ ಕೋರಿದ್ದರು. ಆದರೆ, ದೇಶದಲ್ಲಿ ನಡೆಯುತ್ತಿರುವ ಗದ್ದಲಗಳಿಗೆ ನೂಪುರ್ ಅವರೇ ಕಾರಣ ಎಂದು ಕಿಡಿಕಾರಿತ್ತು. ಬಳಿಕ ಅವರು ಆ ಅರ್ಜಿಯನ್ನು ವಾಪಸ್ ಪಡೆದಿದ್ದರು.

ಹೊಸದಾಗಿ ಸಲ್ಲಿಸಿರುವ ಅರ್ಜಿಯಲ್ಲಿ ನೂಪುರ್, ಜುಲೈ 1ರಂದು ಕೋರ್ಟ್ ನಡೆಸಿದ ಟೀಕಾಪ್ರಹಾರದ ಬಳಿಕ ಕ್ಷುಲ್ಲಕ ಶಕ್ತಿಗಳು ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಹಾಕುತ್ತಿವೆ ಎಂದು ಆರೋಪಿಸಿದ್ದಾರೆ. ಹಿಂದಿನ ಅರ್ಜಿಯಲ್ಲಿ ಕೂಡ ಅವರು ಬೆದರಿಕೆ ಬಗ್ಗೆ ಉಲ್ಲೇಖಿಸಿದ್ದರು. ಆದರೆ ನ್ಯಾಯಾಲಯ, “ಅವರು ಬೆದರಿಕೆ ಎದುರಿಸುತ್ತಿದ್ದಾರೆಯೇ ಅಥವಾ ಅವರೇ ಭದ್ರತಾ ಬೆದರಿಕೆಯಾಗಿದ್ದಾರೆಯೇ? ಇದು ನಾಚಿಕೆಗೇಡು. ಅವರು ಇಡೀ ದೇಶದ ಕ್ಷಮೆ ಕೋರಬೇಕು” ಎಂದು ಹೇಳಿತ್ತು.

- Advertisement -
spot_img

Latest News

error: Content is protected !!