Sunday, June 28, 2026
Homeಕರಾವಳಿಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಪೈ ರಾಜಿನಾಮೆ !

ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಪೈ ರಾಜಿನಾಮೆ !

- Advertisement -
- Advertisement -

ಬೆಳ್ತಂಗಡಿ : ಲುಕ್ಮಾನ್ ಬಂಟ್ವಾಳ್ ಅಧ್ಯಕ್ಷರು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಸಮಿತಿಯವರಿಗೆ ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ (ನಗರ) ಅಧ್ಯಕ್ಷ ಸ್ಥಾನಕ್ಕೆ ಕಳೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಅನಿಲ್ ಪೈ ಬಂಗಾಡಿ ರಾಜಿನಾಮೆಯನ್ನು ಸಲ್ಲಿಸಿದ್ದಾರೆ.

ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಅಧ್ಯಕ್ಷತೆಯ ನೆಲೆಯಲ್ಲಿ ನನಗೆ ಪಕ್ಷದ ಕೆಲಸ ಮಾಡಲು , ಯುವಜನರನ್ನು ಸಂಘಟಿಸಲು ಅಸಾಧ್ಯವಾಗಿದೆ. ಜೊತೆಗೆ ನಾನು ನನ್ನ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಯುವ ಕಾಂಗ್ರೆಸ್ ಅಧ್ಯಕ್ಷತೆಯಲ್ಲಿ ಮುಂದುವರಿಯಲು ಅಸಾಧ್ಯವಾಗಿದೆ. ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಸದಸ್ಯನಾಗಿ ಮುಂದುವರಿಯಲು ನಿರ್ಧರಿಸಿರುತ್ತೇನೆ. ಯಾವುದೇ ಕಾರಣಕ್ಕೂ ಬೇರೆ ಯಾವುದೇ ಪಕ್ಷಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ಈ ಮೂಲಕ ಧೃಡೀಕರಿಸುತ್ತೇನೆ ಎಂದು ತಮ್ಮ ರಾಜಿನಾಮೆ ಪತ್ರದಲ್ಲಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅನಿಲ್ ಪೈ ಅವರು ರಾಜಿನಾಮೆ ನೀಡಿದ ಪತ್ರ ವೈರಲ್ ಅಗಿದೆ.

ಅನಿಲ್ ಪೈ ಅವರ ರಾಜಿನಾಮೆ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡರು ಅಂಗೀಕರಿಸುತ್ತಾರಾ ಅಥವಾ ಮುಂದುವರಿಯಲು ಮನವೊಲಿಸುತ್ತಾರಾ ಎಂದು ನೋಡಬೇಕು.

- Advertisement -

Latest News

error: Content is protected !!