- Advertisement -
![]()
- Advertisement -
ಬೆಂಗಳೂರು: ನಿರ್ಮಾಣದ ಹಂತದ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ದಿಢೀರ್ ಆಗಿ ಬುಡಮೇಲಾಗಿ ಬಿದ್ದ ಘಟನೆ ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬು ಸಾ ಪಾಳ್ಯದಲ್ಲಿ ನಡೆದಿದೆ.
ಕಟ್ಟಡದ ಒಳಗೆ ಸಿಲುಕಿದ್ದ ಒಬ್ಬರ ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ಇನ್ನೂ ಐವರು ಕಾರ್ಮಿಕರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
https://www.facebook.com/watch/?
ನಿರ್ಮಾಣ ಹಂತದ ಕಟ್ಟಡದಲ್ಲಿ ‘ಒಟ್ಟು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನೆಲಮಹಡಿಯಲ್ಲಿ ಮಹಿಳೆ ಸೇರಿದಂತೆ ಐವರು ಕಾರ್ಮಿಕರು ಸಿಮೆಂಟ್ ಮಿಶ್ರಣದ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ನಾಪತ್ತೆ ಆಗಿದ್ದಾರೆ. ಕಟ್ಟಡದ ವಿವಿಧ ಭಾಗದಲ್ಲಿ ಸಿಲುಕಿದ್ದ 14 ಮಂದಿಯನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
- Advertisement -


