- Advertisement -
- Advertisement -
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಪ್ಪುಂದದ ಫ್ಲೈಓವರ್ ನಲ್ಲಿ ನಿಲ್ಲಿಸಿದ್ದ ಟಾಟಾ ಏಸ್ ವಾಹನಕ್ಕೆ ಇನ್ಸುಲೇಟರ್ ವಾಹನ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಇಂದು ಸಂಜೆ ಈ ಘಟನೆ ನಡೆದಿದ್ದು, ಇನ್ಸುಲೇಟರ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಪಂಕ್ಚರ್ ಆಗಿದ್ದ ಟಾಟಾ ಏಸ್ ಟಯರ್ ಬದಲಾಯಿಸುತ್ತಿದ್ದ ವೇಳೆ ಹಿಂದೆಯಿಂದ ಬಂದ ಇನ್ಸುಲೇಟರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ಡಯವೈಡರ್ ಏರಿ ನಿಂತಿದೆ. ಇನ್ಸುಲೇಟರ್ ಮುಂಭಾಗ ಜಖಂಗೊಂಡಿದೆ.
- Advertisement -