Wednesday, June 3, 2026
Homeಕರಾವಳಿಕಾರೊಂದು ನೆರೆ ನೀರಲ್ಲಿ ಕೊಚ್ಚಿಹೋದ ಘಟನೆ: ಮೂವರು ಪ್ರಾಣಾಪಾಯದಿಂದ ಪಾರು

ಕಾರೊಂದು ನೆರೆ ನೀರಲ್ಲಿ ಕೊಚ್ಚಿಹೋದ ಘಟನೆ: ಮೂವರು ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಉಡುಪಿ: ಜಿಲ್ಲೆಯಾದ್ಯಾಂತ ಮಳೆ ಆರ್ಭಟ ಜೋರಾಗಿದ್ದು, ಕನ್ನರ್ಪಾಡಿಯಲ್ಲಿ ಕಾರೊಂದು ರಸ್ತೆಯಿಂದ ಕೊಚ್ಚಿಹೋಗಿ, ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಕಾರೊಂದು ಕನ್ನರ್ಪಾಡಿಯಲ್ಲಿ ಮಳೆ ನೀರು ಸಾಗುವ ತೋಡಿನ ಸಮೀಪ ಸಾಗುತ್ತಿದ್ದ ವೇಳೆ, ಏಕಾಏಕಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು ಮೂವರು ಪ್ರಯಾಣಿಕರು‌ ಕಾರಿನ ಬಾಗಿಲು ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳ‌ ಸಿಬಂದಿ ಕೊಚ್ಚಿಹೋದ ಕಾರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಾದ ಗುಂಡಿಬೈಲು, ಕಲ್ಸಂಕ, ಮಠದಬೆಟ್ಟು ಜಲಾವೃತವಾಗಿವೆ. ಅಗ್ನಿಶಾಮಕ ದಳ ನಿರಂತರ ಕಾರ್ಯಚರಣೆ ನಡೆಸುತ್ತಿದ್ದು ನೆರೆಗೆ ಸಿಲುಕಿದ್ದ ಹಲವರ ರಕ್ಷಣೆ ಮಾಡಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರವಹಿಸುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ.

- Advertisement -

Latest News

error: Content is protected !!