Sunday, June 14, 2026
Homeಕರಾವಳಿಉಡುಪಿಕಾಪು: ಹಂಚಿನಿಂದ ವ್ಯಕ್ತಿಯ ತಲೆಗೆ ಹೊಡೆದು ಹಲ್ಲೆ !

ಕಾಪು: ಹಂಚಿನಿಂದ ವ್ಯಕ್ತಿಯ ತಲೆಗೆ ಹೊಡೆದು ಹಲ್ಲೆ !

- Advertisement -
- Advertisement -

ಕಾಪುವಿನ ಏಣಗುಡ್ಡೆಯಲ್ಲಿ ಮನೆಯ ಹಿಂಬದಿಯ ಅತ್ತೆ ಮನೆಯ ಕೋಳಿಗಳು ತನ್ನ ಮನೆಯ ಕೈ ತೋಟವನ್ನು ಹಾಳು ಮಾಡುತ್ತಿರುವ ಕುರಿತು ಸುನೀಲ್ ಎಂಬವರು ತಮ್ಮ ಅತ್ತೆ ಬಳಿ ಹೇಳಿದಕ್ಕೆ ಭರತ್ ಎಂಬಾತ ಸುನಿಲ್ ಅವರಿಗೆ ಹಂಚಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ .

ಈ ಬಗ್ಗೆ ಸುನೀಲ್ ಅವರು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ . ಸುನೀಲ್ ಅವರ ಮನೆಯ ಹಿಂಭಾಗದಲ್ಲಿ ಅವರ ಅತ್ತೆ ಬೇಬಿಯವರ ಮನೆ ಇದೆ , ಅವರ ಮನೆಯಲ್ಲಿರುವ 15 ರಿಂದ 20 ಕೋಳಿಗಳು ಬೆಳಗ್ಗೆ ಗೂಡಿನಿಂದ ಬಿಟ್ಟ ಕೂಡಲೇ ಇವರ ಮನೆಯ ಕಂಪೌಂಡ ಹಾರಿ ಮನೆಯ ಜಾಗದಲ್ಲಿ ಇರುವ ತರಕಾರಿ ಗಿಡ ಹಾಗೂ ಬೀಜಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿತ್ತು ಹಾಗೂ ಕೆಸರನ್ನು ಕೋಳಿಗಳು ಕಾಲಿನಿಂದ ಕೆದರಿ ಮನೆಯ ಸುತ್ತ ಗಲೀಜು ಮಾಡುತ್ತಿತ್ತು.

ಈ ಬಗ್ಗೆ ನಿನ್ನೆ ಮದ್ಯಾಹ್ನದ ವೇಳೆ ಸುನೀಲ್ ಅವರು ಬೇಬಿ ರವರಲ್ಲಿ ತಿಳಿಸಿದ್ದರು.ಬಳಿಕ ಸಂಜೆ ವೇಳೆ ಸುನೀಲ್ ರವರು ಮನೆಯಲ್ಲಿ ಮಲಗಿದ್ದಾಗ ಇವರ ಅತ್ತೆಯ ಮಗ ಭರತನು ಸುನೀಲ್ ಅವರಿಗೆ ಬೈದು ಮನೆಯ ಕಂಪೌಂಡ ಮೇಲೆ ಇದ್ದ ಹಂಚಿನಿಂದ ಸುನಿಲ್ ರವರ ತಲೆಯ ಹಿಂಭಾಗಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ.

ಇದರಿಂದ ಸುನೀಲ್ ಅವರಿಗೆ ಗಾಯವಾಗಿದ್ದು ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ . ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!