Tuesday, April 30, 2024
Homeಅಪರಾಧಅನಾಥವಾಗಿ ಅನಾಥಾಶ್ರಮ ಸೇರಿದ ವಯೋವೃದ್ಧ ತಂದೆ; ಮಗನ ಜವಾಬ್ದಾರಿಗೆ ವಹಿಸಿದ ವೇಣೂರು ಪೊಲೀಸರು

ಅನಾಥವಾಗಿ ಅನಾಥಾಶ್ರಮ ಸೇರಿದ ವಯೋವೃದ್ಧ ತಂದೆ; ಮಗನ ಜವಾಬ್ದಾರಿಗೆ ವಹಿಸಿದ ವೇಣೂರು ಪೊಲೀಸರು

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ನಾಲ್ಕೂರು ಗ್ರಾಮದ ಆಸುಪಾಸಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ 2024 ಮಾರ್ಚ್ 13 ಬುಧವಾರದಂದು ರಾತ್ರಿ 12 ಗಂಟೆಗೆ ಅನಾಥವಾಗಿ ಹಸಿವಿನಿಂದ ನರಳುತ್ತಿದ್ದ ವಯೋವೃದ್ಧ ರೋರ್ವರನ್ನು ಸ್ಥಳೀಯ ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಅಮೀನ್ ಬಳಗವು ಪೋಲೀಸ್ ರ ಸಹಾಯದಿಂದ ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮ ದಲ್ಲಿ ತಾತ್ಕಾಲಿಕ ನೆಲೆಯನ್ನು ಕಲ್ಪಿಸಲಾಗಿತ್ತು.

ವಯೋವೃದ್ಧರಿಗೆ ಕಿವಿ ಕೇಳದೆ ಇದ್ದ ಕಾರಣ, ಪೊಲೀಸರು ಮಗನ ಕುರಿತು ಮಾಹಿತಿ ಪಡೆಯಲು ಹರಸಾಹಸ ಮಾಡಬೇಕಾಯಿತು. ಈ ಮೂಲಕ ಮಾಹಿತಿಯನ್ನು ಪಡೆದ ಪೋಲಿಸರು ಮಕ್ಕಳನ್ನು ಸಂಪರ್ಕಿಸಿ, ವೇಣೂರು ಪೋಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಠಾಣೆಗೆ ಬಂದ ಮಗನಿಗೆ ಪೋಲಿಸರು ಬುದ್ಧಿವಾದ ಹೇಳಿ, ವಯೋ ವೃದ್ಧ ತಂದೆಯನ್ನು ಮಗನ ಜತೆ ಕಳುಹಿಸಲಾಗಿದೆ.

ಈ ವಯೋವೃದ್ಧ ಉಡುಪಿಯ ಶಂಕರನಾರಾಯಣ ಪೋಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಅವರು ವಯೋ ಸಹಜ ಡಿಮೆನ್ಸಿಯಾ ರೋಗದಿಂದ ಬಳಲುತ್ತಿದ್ದು ಮನೆಯಲ್ಲಿ ನಿಲ್ಲದೆ ಊರೂರು ತಿರುಗುವ ಅಭ್ಯಾಸ ಹಾಗೂ ಮರಗುಳಿತನವಿದೆ ಎಂದು ತಿಳಿದು ಬಂದಿದೆ.

ಮಗನಿಗೆ ವಯೋವೃದ್ಧನನ್ನು ಹಸ್ತಾಂತರ ಮಾಡಿದಕ್ಕೆ ರವೀಂದ್ರ ಅಮೀನ್ ಮತ್ತು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಪೋಲೀಸ್ ಠಾಣೆಯಲ್ಲಿ ಸಾಕ್ಷಿ ಯಾಗಿದ್ದರು.

- Advertisement -
spot_img

Latest News

error: Content is protected !!