ಒಡಿಶಾದ ಗಂಜಾಂ ಜಿಲ್ಲೆಯ ಕಲಾವಿದರ ತಂಡವೊಂದು ‘ರಾಮಾಯಣʼ ನಾಟಕ ಪ್ರದರ್ಶನದ ಮಾಡುತ್ತಿದ್ದ ವೇಳೆ ರಾಕ್ಷಸನ ಪಾತ್ರ ನಿರ್ವಹಿಸುತ್ತಿದ್ದ ರಂಗಭೂಮಿ ಕಲಾವಿದನೋರ್ವ ವೇದಿಕೆಯ ಮೇಲೆ ಜೀವಂತ ಹಂದಿಯ ಹೊಟ್ಟೆಯನ್ನು ಚಾಕುವಿನಿಂದ ಸೀಳಿ, ಬಗೆದು ಹಸಿ ಮಾಂಸವನ್ನು ಪ್ರೇಕ್ಷಕರ ಮುಂದೆಯೇ ವೇದಿಕೆಯಲ್ಲಿ ಕಿತ್ತು ತಿಂದಿರುವ ಘಟನೆ ನಡೆದಿರುವುದು ವರದಿಯಾಗಿದೆ.
ರಾಕ್ಷಸ ಪಾತ್ರ ನಿರ್ವಹಿಸುತ್ತಿದ್ದ 45 ವರ್ಷದ ಬಿಂಬಾಧರ ಗೌಡ ಎಂಬಾತನನ್ನು ಬಂಧಿಸಲಾಗಿದೆ. ನವೆಂಬರ್ 24 ರಂದು ಹಿಂಜಿಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಲಾಬ್ ಗ್ರಾಮದಲ್ಲಿ ನಡೆದ ನಡೆದ ರಾಮಾಯಣ ನಾಟಕದಲ್ಲಿ ಈ ಘಟನೆ ನಡೆದ್ದು, ಕಂಜಿಯಾನಲ್ ಯಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರ ಗುಂಪೊಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಿ ನಾಟಕ ಆಯೋಜಕರಲ್ಲಿ ಕೂಡ ಒಬ್ಬರನ್ನು ಬಂಧಿಸಲಾಗಿದೆ.
ನಾಟಕದಲ್ಲಿ ಜನರನ್ನು ಮನರಂಜಿಸುವ ನಿಟ್ಟಿನಲ್ಲಿ ಜೀವಂತ ಹಾವು ಹಾಗೂ ಹಂದಿಯನ್ನು ಪ್ರದರ್ಶಿಸಲಾಗಿತ್ತು.
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಾಣಿದಯಾ ಸಂಘದವರು ಕಲಾವಿದರ ಬಂಧನಕ್ಕೆ ಆಗ್ರಹಿಸಿದ್ದಾರೆ. ಗಿದೆ. ಆಡಳಿತಾರೂಢ ಬಿಜೆಪಿ ಸದಸ್ಯರಾದ ಬಾಬು ಸಿಂಗ್ ಮತ್ತು ಸನಾತನ ಬಿಜುಲಿ ಅವರು ವಿಧಾನಸಭೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.