Thursday, June 4, 2026
Homeತಾಜಾ ಸುದ್ದಿಮಂಗಳೂರು: ಬೈಕ್‌ ಹಾಗೂ ಖಾಸಗಿ ಬಸ್‌ ನಡುವೆ ಅಪಘಾತ:ಸ್ಥಳದಲ್ಲೇ ಮೃತಪಟ್ಟ 12 ವರ್ಷದ ಬಾಲಕ

ಮಂಗಳೂರು: ಬೈಕ್‌ ಹಾಗೂ ಖಾಸಗಿ ಬಸ್‌ ನಡುವೆ ಅಪಘಾತ:ಸ್ಥಳದಲ್ಲೇ ಮೃತಪಟ್ಟ 12 ವರ್ಷದ ಬಾಲಕ

- Advertisement -
- Advertisement -

ಮಂಗಳೂರು: ಬೈಕ್‌ ಹಾಗೂ ಖಾಸಗೀ ಬಸ್‌ ನಡುವೆ ಅಪಘಾತ ಸಂಭವಿಸಿ 12 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಪಡೀಲ್ ಕಣ್ಣೂರು ನಿವಾಸಿ ರಕ್ಷಣ್ ಮೃತಪಟ್ಟ ಬಾಲಕ. ಬಸ್‌ ಚಾಲಕ ಓವರ್‌ಟೇಕ್‌ ಮಾಡಲು ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.  ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಹಸವಾರನಾಗಿ ಸಂಚರಿಸುತ್ತಿದ್ದ ಬಾಲಕ ರಕ್ಷಣ್ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮಂಗಳೂರು ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!