Friday, June 26, 2026
Homeಕರಾವಳಿಪುತ್ತೂರು; 50 ವರ್ಷದ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶಕ್ಕೆ ಅಮಿತ್ ಶಾ ಚಾಲನೆ

ಪುತ್ತೂರು; 50 ವರ್ಷದ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶಕ್ಕೆ ಅಮಿತ್ ಶಾ ಚಾಲನೆ

- Advertisement -
- Advertisement -

ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜಿನ ಬೃಹತ್‌ ಆವರಣದಲ್ಲಿ 50 ವರ್ಷದ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದರು.

ಕೇರಳದ ಕಣ್ಣೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹನುಮಗಿರಿ ಹೆಲಿಪ್ಯಾಡ್ ಮೂಲಕ ಹನುಮಗಿರಿ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಅಮರಗಿರಿ ಭಾರತ್‌ ಮಾತೆಗೆ ಪುಷ್ಪರ್ಚನೆ ಮಾಡಿದರು.ನಂತ್ರ ಮೂರು ಕೋಟಿ ವೆಚ್ಚದಲ್ಲಿ ಸುಮಾರು 2.5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅಮೃತ ಶಿಲೆಯ ಭಾರತ್‌ ಮಾತ ವಿಗ್ರಹವನ್ನು ಉದ್ಘಾಟಿಸಿದ್ದಾರೆ.

ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿನ ಮೈದಾನದಲ್ಲಿ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶ ಆಗಮಿಸಿ, ಜನರತ್ತ ಕೈ ಬೀಸಿದ್ದಾರೆ. ಬಳಿಕ ವೇದಿಕೆಗೆ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಮಿತ್‌ ಶಾ ಪರವಾಗಿ ಘೋಷಣೆ ಕೂಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದಾರೆ.

ಅಮಿತ್‌ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ , ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ನಾಯಕರು ಸಾಥ್‌ ನೀಡಿದ್ದಾರೆ.

- Advertisement -

Latest News

error: Content is protected !!