- Advertisement -
- Advertisement -
ಬೆಂಗಳೂರು : ಕೊರೊನಾ ಅನ್ನೋ ಹೆಮ್ಮಾರಿ ಮನುಷ್ಯನಲ್ಲಿರುವ ಮನುಷ್ಯತ್ವಕ್ಕೆ ನಿಜಕ್ಕೂ ಒಂದು ಪರೀಕ್ಷೆ. ಒಂದು ಕಡೆ ಕೊರೊನಾ ಆರ್ಭಟಿಸುತ್ತಿದ್ದರೆ ಮತ್ತೊಂದು ಕಡೆ ಅದೆಷ್ಟೋ ಅಮಾನವೀಯ ಘಟನೆಗಳು ಮರುಕಳಿಸುತ್ತಿವೆ. ಅಂತಹದ್ದೇ ಘಟನೆಗೆ ಇವತ್ತು ಬೆಂಗಳೂರು ಸಾಕ್ಷಿಯಾಗಿದೆ.
ಆ್ಯಂಬುಲೆನ್ಸ್ ಚಾಲಕನೊಬ್ಬ ಡೆಡ್ಲಿ ಕೊರೊನಾಕ್ಕೆ ಬಲಿಯಾದ ಗೃಹಿಣಿಯೊಬ್ಬಳ ಶವವನ್ನು ಬೇಕಾಬಿಟ್ಟಿಯಾಗಿ ಬಿಟ್ಟುಹೋದ ಅಮಾನವೀಯ ಘಟನೆ ನಡೆದಿದೆ. ಬೆಂಗಳೂರಿನ ಶಾಂತಿನಗರದ ವಿದ್ಯುತ್ ಚಿತಾಗಾರದ ಮುಂಭಾಗ ದಲ್ಲಿ ಗೃಹಿಣಿಯ ಶವವನ್ನು ಇಟ್ಟು ಆ್ಯಂಬುಲೆನ್ಸ್ ಚಾಲಕ ಪರಾರಿಯಾಗಿದ್ದಾನೆ.
ಶವ ಪರೀಕ್ಷೆ ಮಾಡಬೇಕಿದೆ ಎಂದು ಕಂಫರ್ಟ್ ಆಸ್ಪತ್ರೆಯಿಂದ ಶವ ತಂದ ಚಾಲಕ ಚಿತಾಗಾರದ ಮುಂದೆ ಹಾಕಿ ಹೋಗಿದ್ದಾನೆ. ಮೃತಳ ಮನೆ ಮಂದಿ ಬೇರೆ ಆಂಬ್ಯುಲೆನ್ಸ್ ತರಿಸಿಕೊಂಡರು. ಬಿಬಿಎಂಪಿ ಸಿಬ್ಬಂದಿ ಮಹಿಳೆಯ ಅಂತ್ಯಸಂಸ್ಕಾರ ಮಾಡಿದ್ದಾರೆ.
- Advertisement -