Thursday, June 4, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ವ್ಯಕ್ತಿಯನ್ನು ಬಲಿ ಪಡೆದ ಆಂಬ್ಯುಲೆನ್ಸ್

ಮಂಗಳೂರು; ಉಳ್ಳಾಲದಲ್ಲಿ ವ್ಯಕ್ತಿಯನ್ನು ಬಲಿ ಪಡೆದ ಆಂಬ್ಯುಲೆನ್ಸ್

- Advertisement -
- Advertisement -

ಮಂಗಳೂರು; ಆಂಬ್ಯುಲೆನ್ಸ್ ಢಿಕ್ಕಿಯಾಗಿ ಪಾದಚಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ತಲಪಾಡಿ ಬಳಿ ಭಾನುವಾರ ನಡೆದಿದೆ.

ಕಾಸರಗೋಡು ಕಯ್ಯಾರ ಸಮೀಪದ ಹೇರೂರು ಬಟ್ಯೋಡ್ ನಿವಾಸಿ ಫ್ರಾನ್ಸಿಸ್ ಡಿಸೋಜ(62) ಮೃತ ದುರ್ದೈವಿ.

ಫ್ರಾನ್ಸಿಸ್ ಡಿಸೋಜ ಅವರು ತಲಪಾಡಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಲೆಂದು ಭಾನುವಾರ ತಲಪಾಡಿಗೆ ಬಂದಿದ್ದರು. ಬಸ್‌ನಿಂದ ಇಳಿದು ರಸ್ತೆ ದಾಟುವಾಗ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!