Saturday, June 6, 2026
Homeಇತರಬೆಂಗಳೂರಿನ ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಡೀನ್ ರನ್ನು ಬಲಿ ಪಡೆದ ಕೊರೊನಾ

ಬೆಂಗಳೂರಿನ ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಡೀನ್ ರನ್ನು ಬಲಿ ಪಡೆದ ಕೊರೊನಾ

- Advertisement -
- Advertisement -

ಬೆಂಗಳೂರುಸಿಲಿಕಾನ್ ಸಿಟಿಯಲ್ಲಿ ಕೊರೊನಾ ರಣಕೇಕೆ ಜೋರಾಗಿದೆ. ಕೊರಾನಾ ತನ್ನ ಸಾವಿನ ಸವಾರಿಯವನ್ನು ಮುಂದುವರೆಸಿದ್ದು, ಬೆಂಗಳೂರಿನ ಪ್ರತಿಷ್ಠಿತ ಅಂಬೇಡ್ಕರ್ ತಾಂತ್ರಿಕ ಕಾಲೇಜಿನ 55 ವರ್ಷದ ಡೀನ್ ನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಅವರ ಪತ್ನಿಗೂ ಕೊರೊನಾ ಸೋಂಕು ಇರೋದು ಇದೀಗ ದೃಢಪಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಮಲ್ಲತಹಳ್ಳಿಯಲ್ಲಿರುವ ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಡೀನ್ ಕಳೆದ ಹಲವು ದಿನಗಳಿಂದಲೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಅವರನ್ನು ನಗರದ ಸೈಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಡೀನ್ ಇತರ ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಇನ್ನು ಡೀನ್ ಅವರ ಇಬ್ಬರು ಮಕ್ಕಳು ಮಾತ್ರವೇ ಮನೆಯಲ್ಲಿದ್ದು, ಡೀನ್ ಅವರ ಮೃತದೇಹವನ್ನು ಸಂಬಂಧಿಗಳಿಗೆ ನೀಡದೇ, ಕೊರೊನಾ ಮಾರ್ಗಸೂಚಿಯಂತೆಯೇ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!