Monday, April 29, 2024
Homeತಾಜಾ ಸುದ್ದಿಅಮೇಜಾನ್ ಸಂಸ್ಥೆ ಕಾನೂನು ಉಲ್ಲಂಘನೆ- ಜಾರಿ ನಿರ್ದೇಶನಾಲಯದ ಮೆಟ್ಟಿಲೇರಿದ ಭಾರತ ವ್ಯಾಪಾರಸ್ಥರ ಒಕ್ಕೂಟ

ಅಮೇಜಾನ್ ಸಂಸ್ಥೆ ಕಾನೂನು ಉಲ್ಲಂಘನೆ- ಜಾರಿ ನಿರ್ದೇಶನಾಲಯದ ಮೆಟ್ಟಿಲೇರಿದ ಭಾರತ ವ್ಯಾಪಾರಸ್ಥರ ಒಕ್ಕೂಟ

spot_img
- Advertisement -
- Advertisement -

ನವದೆಹಲಿ: ಈಗಾಗಲೇ ಭಾರತದಲ್ಲಿ ಬೆಳೆದುನಿಂತು ಪದೇ ಪದೇ ಕಾನೂನು ಉಲ್ಲಂಘನೆ ಮಾಡಿರುವ ಆನ್​ಲೈನ್ ಮಾರಾಟ ಸಂಸ್ಥೆ ಅಮೇಜಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತದ ವ್ಯಾಪಾರಸ್ಥರ ಒಕ್ಕೂಟ ಸಿಎಐಟಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ. ತನ್ನ ಮ್ನನ್ವಿಯಲ್ಲಿ ಸಂಸ್ಥೆ ಕಡಿಮೆ ಬೆಲೆಗಳಿಗೆ ಮಾರಾಟ ಮಾಡಿ ಆ ಮೂಲಕ ಸ್ಥಳೀಯ ಸಣ್ಣ ವರ್ತಕರ ವ್ಯವಹಾರಕ್ಕೆನಷ್ಟ ಮಾಡಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ನಮ್ಮ ದೇಶದ ವ್ಯಾಪಾರ ಕಾನೂನಿನ , ನಿಯಮ ನಿಬಂಧನೆಗಳನ್ನ ಘಂಟಾಘೋಷವಾಗಿ ಉಲ್ಲಂಘಿಸುತ್ತಾ ಬಂದಿರುವ ಅಮೇಜಾನ್ ಸಂಸ್ಥೆ ದೇಶದ ಕೋಟ್ಯಂತರ ಸಣ್ಣ ವರ್ತಕರ ವ್ಯಾಪಾರ ಹಾಳುಮಾಡಿರುವ ಕುರಿತು ಇಡಿ ತನಿಖಾ ಸಂಸ್ಥೆಗೆ ಪತ್ರ ಬರೆದಿರುವುದಾಗಿ ಸಿಎಐಟಿ ತಿಳಿಸಿದೆ.

- Advertisement -
spot_img

Latest News

error: Content is protected !!