Saturday, June 13, 2026
Homeತಾಜಾ ಸುದ್ದಿನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ; ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಗೆಲುವು

ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ; ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಗೆಲುವು

- Advertisement -
- Advertisement -

ಮೈಸೂರು: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಚುನಾವಣೆಯಲ್ಲಿ ಜೆಡಿಎಸ್ ಜಯ ಗಳಿಸಿದೆ.ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಎಸ್.ಎಲ್‌. ಭೋಜೇಗೌಡ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ

ಒಟ್ಟು 19,479 ಮತಗಳು ಚಲಾವಣೆಯಾಗಿದ್ದು, ಭೋಜೇಗೌಡ 5,267 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 18,658 ಸಿಂಧು ಮತಗಳಾಗಿದ್ದು, 821 ಕುಲಗೆಟ್ಟ ಮತಗಳಾಗಿವೆ.

9,330 ಮತಗಳಿಗೆ ಗೆಲುವಿನ ಕೋಟಾ ನಿಗದಿಯಾಗಿದ್ದು 9,829 ಮತಗಳಿಗೆ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಜಯ ಪಡೆದಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4,562 ಮತಗಳನ್ನು ಮಾತ್ರ ಪಡೆದು ಪರಾಜಿತರಾಗಿದ್ದಾರೆ‌.

- Advertisement -

Latest News

error: Content is protected !!