Monday, May 20, 2024
Homeತಾಜಾ ಸುದ್ದಿಕಡಬ: ಬೆಳಕು ಯೋಜನೆಯಲ್ಲಿ ಅವ್ಯವಹಾರದ ಆರೋಪ: ಸ್ಥಳೀಯ ಗುತ್ತಿಗೆದಾರರ ವಿರುದ್ಧ ಇಂಧನ ಸಚಿವರಿಗೆ ದೂರು

ಕಡಬ: ಬೆಳಕು ಯೋಜನೆಯಲ್ಲಿ ಅವ್ಯವಹಾರದ ಆರೋಪ: ಸ್ಥಳೀಯ ಗುತ್ತಿಗೆದಾರರ ವಿರುದ್ಧ ಇಂಧನ ಸಚಿವರಿಗೆ ದೂರು

spot_img
- Advertisement -
- Advertisement -

ಕಡಬ: ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಸರಕಾರದ ಬೆಳಕು ಯೋಜನೆಯಡಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಸ್ಥಳೀಯ ಗುತ್ತಿಗೆದಾರ ಕಡಬ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಭಿಲಾಷ್ ಪಿ.ಕೆ ಎಂಬುವರ ವಿರುದ್ಧ ಆರೋಪ ಕೇಳಿಬಂದಿದೆ. ಈ ಸಂಬಂಧ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಇಂಧನ ಸಚಿವರಿಗೆ ದೂರು ನೀಡಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಈ ಬಗ್ಗೆ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ತಿಳಿಸಿದ್ರು.

ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಗಮ್ಮ, ಅಭಿಲಾಷ್ ಅವರು ಬೆಳಕು ಯೋಜನೆ ಅನುಷ್ಠಾನ ಮಾಡಲು ಫಲಾನುಭವಿಗಳಿಂದ ಬಲತ್ಕಾರವಾಗಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿಯಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸಬೇಕೆಂದು ಎಂದು ನಿರ್ಣಯಿಸಲಾಗಿದೆ ಎಂದರು.

ಬೆಳಕು ಯೋಜನೆ ಸರಕಾರ ತಂದ ಒಂದು ಅತ್ಯುತ್ತಮ ಯೋಜನೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ಅನೇಕ ಬಡ ಜನರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಷ್ಟೇ ಖರ್ಚಾದರೂ ಸರಕಾರವೇ ಭರಿಸುತ್ತದೆ. ನಯಾ ಪೈಸೆಯನ್ನೂ ಫಲಾನುಭವಿ ನೀಡುವ ಹಾಗಿಲ್ಲ. ಚಾ ತಿಂಡಿ, ಊಟದ ಖರ್ಚು ಕೂಡಾ ಫಲಾನುಭವಿಗಳು ನೀಡುವಂತಿಲ್ಲ. ಆದರೆ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಅಭಿಲಾಷ್ ಅವರು ಬಡವರ ಕೈಯಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರು ವ್ಯಕ್ತವಾಗಿದೆ.

ಮುಖ್ಯವಾಗಿ ಫಲಾನುಭವಿಗಳು ಗ್ರಾ.ಪಂ.ನಲ್ಲಿ ಮನವಿ ಸಲ್ಲಿಸಿದ ಬಳಿಕ ಆಡಳಿತ ಮಂಡಳಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೆಸ್ಕಾಂ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಆ ಬಳಿಕ ಇಲಾಖೆ ಮಂಜೂರಾತಿ ಪಟ್ಟಿಯನ್ನು ಅಂತಿಮಗೊಳಿಸಿ ಪಂಚಾಯಿತಿಗೆ ಕಳುಹಿಸಿಕೊಡಬೇಕು. ಆದರೆ, ಇಲಾಖೆಯಿಂದ ಗುತ್ತಿಗೆದಾರರೇ ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು ಗ್ರಾ.ಪಂ ಗಮನಕ್ಕೆ ತಾರದೆ ಫಲಾನುಭವಿಗಳಿಂದ ಹಣ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಫಲಾನುಭವಿಯೊಬ್ಬರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ 26-6-2022ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಭಿಲಾಷ್ ಅವರ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಇಂಧನ ಸಚಿವರಿಗೆ ದೂರು ನೀಡಿ ಅಭಿಲಾಷ್ ಅವರ ವಿರುದ್ಧ ಕ್ರಮ ಕೈಗೊಂಡು, ಅವರ ಗುತ್ತಿಗೆ ಪರವಾನಿಗೆಯನ್ನು ರದ್ದು ಪಡಿಸಲು ತಕ್ಷಣ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ ಎಂದು ಗಂಗಮ್ಮ ತಿಳಿಸಿದ್ರು.

- Advertisement -
spot_img

Latest News

error: Content is protected !!