Friday, June 5, 2026
Homeಕರಾವಳಿಸುರತ್ಕಲ್: ಮದ್ಯದ ಬಾಟಲ್ ಎಸೆದದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದೇ ಹೋಯಿತು ರೇಪ್ ಯತ್ನ!

ಸುರತ್ಕಲ್: ಮದ್ಯದ ಬಾಟಲ್ ಎಸೆದದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದೇ ಹೋಯಿತು ರೇಪ್ ಯತ್ನ!

- Advertisement -
- Advertisement -

ಸುರತ್ಕಲ್: ಮದ್ಯದ ನಶೆಯೇ ಹಾಗೆ, ಕುಡಿದ ಮೇಲೆ ಬುದ್ದಿ ತನ್ನ ಸ್ಥಿಮಿತ ಕಳೆದುಕೊಳ್ಳುತ್ತದೆ. ಆದರೆ ಇಲ್ಲೊಂದು ಯುವಕರ ಗುಂಪೊಂದು ನಶೆಯಲ್ಲಿ ರಾಕ್ಷಸರಾಗಿದ್ದಾರೆ.

ಮದ್ಯ ಸೇವಿಸಿದ ನಶೆಯಲ್ಲಿದ್ದ ಯುವಕರ ತಂಡ ತೇಲಾಡುತ್ತಾ ಮದ್ಯ ಬಾಟಲ್ ಗಳನ್ನು ಬೇರೊಬ್ಬರ ಮನೆ ಬಳಿ ಎಸೆದಿದ್ದರು. ಇದನ್ನು ಕಂಡ ಬಾಟಲ್ ಎಸೆದ ಪಕ್ಕದ ಮನೆಯ ಮಹಿಳೆಯೊಬ್ಬರು ಯುವಕರನ್ನು ಈ ಬಗ್ಗೆ ಪ್ರಶ್ನಿಸಿದರು. ಆದರೆ ಈ ಸಮಯದಲ್ಲಿ ರವೀಂದ್ರ ಆಚಾರಿ ಎಂಬಾತ ಮಹಿಳೆಯ ಮೇಲೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮದ್ಯದ ನಶೆಯಲ್ಲಿದ್ದ ರವೀಂದ್ರ ಆಚಾರಿಯ ಸ್ನೇಹಿತರು ಮಹಿಳೆಯ ಬಟ್ಟೆ ಹರಿದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಘಟನೆ ನಡೆದಿರುವುದು ಮಂಗಳೂರಿನ ಸುರತ್ಕಲ್ ವ್ಯಾಪ್ತಿಯ ನಿತ್ಯಾನಂದ ಭಜನಾ ಮಂದಿರದ ಪರಿಸರದಲ್ಲಿ. ಘಟನೆ ನಡೆದ ವೇಳೆ ಮಹಿಳೆಯ ಪತಿ ಕೂಡಾ ಮನೆಯಲ್ಲೇ ಇದ್ದು, ಪತಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದೆ.

ಆರೋಪಿಗಳನ್ನು ರವೀಂದ್ರ ಆಚಾರಿ, ಎ.ಪಿ.ಮೋಹನ್ ಗಣೇಶಪುರ, ಹರ್ಷಿತ್, ಸುಧಾಕರ ಬೊಳ್ಳಾಜೆ ಎಂದು ಗುರುತಿಸಲಾಗಿದ್ದು, ಇವರನ್ನು ಪೋಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!